ಕಾಂಗ್ರೆಸ್ ವಲಯದಲ್ಲಿ ಶಾಸಕರುಗಳ ನಡುವೆ ಭಿನ್ನಮತ ಶುರುವಾಗಿದೆ. ಇದಕ್ಕೆ ಕಾರವಾರದಲ್ಲಿ ನಡೆದ ಕೆಡಿಪಿ ಸಭೆಯೇ ನಿದರ್ಶನ. ಈ ಸಭೆಯಲ್ಲಿ ಆಡಳಿತ ಪಕ್ಷದ ಶಾಸಕರೇ ಇರಲಿಲ್ಲ.
ಕಾಂಗ್ರೆಸ್ ಪಕ್ಷ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಿಂದ ಆರ್ ವಿ ದೇಶಪಾಂಡೆ ಮತ್ತೊಮ್ಮೆ ಮಂತ್ರಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಭಟ್ಕಳದ ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ಸಿಕ್ಕಿತ್ತು. ಇದಾದ ನಂತರ ದೇಶಪಾಂಡೆ ಮಂಕಾಳ ವೈದ್ಯರ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಮಂಕಾಳ ವೈದ್ಯ ಸಹ ಜಿಲ್ಲಾ ಉಸ್ತುವಾರಿ ಸಚಿವರಾದರೂ ವರ್ಷ ಕಳೆದರೂ ಹಳಿಯಾಳ ಕ್ಷೇತ್ರಕ್ಕೆ ಮಾತ್ರ ಕಾಲಿಟ್ಟಿರಲಿಲ್ಲ.
ಇನ್ನೂ ದೇಶಪಾಂಡೆ ಸಹ ತಮ್ಮ ಹಿಡಿತನ ಎಂಬAತೆ ಕೆಡಿಪಿ ಸಭೆಗೆ ಇದುವರೆಗೆ ಆಗಿಮಿಸಿರಲಿಲ್ಲ. ದೇಶಪಾಂಡೆ ಹೊರತು ಪಡಿಸಿದರೆ ಶಿರಸಿಯ ಭೀಮಣ್ಣ ನಾಯ್ಕ, ಕಾರವಾರದ ಸತೀಶ್ ಸೈಲ್ ಕೆಡಿಪಿ ಸಭೆಗಳಿಗೆ ಗೈರಾಗುತ್ತಿರಲಿಲ್ಲ. ಅಲ್ಲದೇ ಶಾಸಕ ಶಿವರಾಮ್ ಹೆಬ್ಬಾರ್ ಸಹ ಕೆಡಿಪಿ ಸಭೆಗೆ ಆಗಮಿಸುತ್ತಿದ್ದರು. ಆದರೆ, ಅವರು ಸಹ ಕಾಣಲಿಲ್ಲ.
ಸದ್ಯ ಚುನಾವಣೆ ಮುಗಿದಿದ್ದು ಮತ್ತೆ ಆಡಳಿತ ಯಂತ್ರ ಚುರುಕುಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಒಂಟಿಯಾಗಿ ಕೆಡಿಪಿ ಸಭೆ ನಡೆಸಿದ್ದಾರೆ. ಜಿಲ್ಲೆಯ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಕೈ ಪಕ್ಷದ ಅಭ್ಯರ್ಥಿ ಲೋಕಸಭೆಯಲ್ಲಿ ಸೋಲು ಅನುಭವಿಸಿದರ ನಡುವೆಯೇ ಕೈ ಶಾಸಕರ ನಡುವೆ ಭಿನ್ನಮತದ ಧ್ವನಿ ಕೇಳಿಬಂದಿದೆ.
ಇನ್ನೂ ಜಿಲ್ಲೆಯಲ್ಲಿ ತನ್ನ ಹಿಡಿತ ಸಹ ಇದೆ ಎನ್ನುವುದನ್ನ ತೋರಿಸಲು ಆಡಳಿತ ಸುಧಾರಾಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಸಹ ಅಧಿಕಾರಿಗಳ ಸಭೆಯನ್ನ ಕರೆದಿದ್ದಾರೆ. 26 ರಂದು ಕಾರವಾರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನ ದೇಶಪಾಂಡೆ ಕರೆದಿದ್ದಾರೆ. ಆಡಳಿತದಲ್ಲಿ ಆಗಬೇಕಾದ ಸುಧಾರಣೆಯ ಬಗ್ಗೆ ಮಾಹಿತಿ ಪಡೆಯಲು ಸಭೆ ಕರೆಯಲಾಗಿದೆ ಎನ್ನಲಾಗಿದ್ದರೂ ದೇಶಪಾಂಡೆ ಅವರು ತಮ್ಮ ಹಿಡಿತವನ್ನ ಜಿಲ್ಲೆಯಲ್ಲಿ ಮುಂದುವರೆಸಲು ಈ ಸಭೆ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.
Discussion about this post