ಶಿರಸಿಯ ಆರೆಕೊಪ್ಪ ಮತ್ತು ಬಚಗಾಂವ್ ಗ್ರಾಮದಲ್ಲಿ ಚಿರತೆ ಓಡಾಟ ಜೋರಾಗಿದೆ. ರಾತ್ರಿ 8 ಗಂಟೆ ಅವಧಿಗೆ ಚಿರತೆ ಓಡಾಡುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅರೆಕೊಪ್ಪ ಮತ್ತು ಬಚಗಾಂವ್ ಗ್ರಾಮದ ಮದ್ಯ ಭಾಗದಲ್ಲಿರುವ ವಿನಾಯಕ ನಾಯ್ಕ ಅವರ ಮನೆ ಗೇಟಿನ ಬಳಿ ಚಿರತೆ ಬಂದು ಹೋಗಿದೆ. ಚಿರತೆಯ ಚಲನ-ವಲನ ನೋಡಿದ ಜನ ಆತಂಕಕ್ಕೆ ಒಳಗಾಗಿದ್ದಾರೆ.
`ನಿತ್ಯ ಈ ಮಾರ್ಗದಲ್ಲಿ ಶಾಲಾ ಮಕ್ಕಳು ಓಡಾಡುತ್ತಾರೆ. ಚಿರತೆ ಓಡಾಟದ ಸುದ್ದಿ ದಟ್ಟವಾಗಿ ಹಬ್ಬಿದ್ದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಅನೇಕರು ಹೆದರುತ್ತಿದ್ದಾರೆ’ ಎಂದು ಊರಿನವರು ಹೇಳಿದರು.
`ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆ ಹಿಡಿಯಬೇಕು. ಜನರ ಆತಂಕವನ್ನು ದೂರ ಮಾಡಬೇಕು’ ಎಂದು ಒತ್ತಾಯಿಸಿದರು.