ಮಧ್ಯಾಹ್ನದ ಊಟಕ್ಕೆ ಏಡಿ ಹಿಡಿಯಲು ಅಘನಾಶಿನಿ ನದಿಗೆ ಹೋದ ಕುಮಟಾದ ಹರೀಶ ಗುನಗಾ ನದಿ ನೀರು ಕುಡಿದು ಸಾವನಪ್ಪಿದ್ದಾರೆ.
ಕುಮಟಾದ ಮಾಸೂರಿನಲ್ಲಿ ಹರೀಶ ಗುನಗಾ (45) ವಾಸವಾಗಿದ್ದರು. ಮೀನುಗಾರಿಕೆ ನಡೆಸಿ ಅವರು ಬದುಕು ಕಟ್ಟಿಕೊಂಡಿದ್ದರು. ಮಾರ್ಚ 11ರ ಬೆಳಗ್ಗೆ `ಏಡಿ ಹಿಡಿದು ತರುವೆ’ ಎಂದು ಮನೆಯಲ್ಲಿ ಹೇಳಿದ್ದರು. ಏಡಿ ಶಿಕಾರಿಗಾಗಿ ಅವರು ಅಘನಾಶಿನಿ ನದಿ ಕಡೆ ಹೊರಟಿದ್ದರು.
ಮಾಸೂರು ಕುರ್ವೆ ತಾರಿ ಹತ್ತಿರ ಏಡಿಗಾಗಿ ಅವರು ಬಲೆ ಬೀಸಿದ್ದರು. ನದಿ ದಂಡೆ ಮೇಲೆ ನಿಂತಿದ್ದ ಅವರ ಕಾಲು ಜಾರಿತು. ಪರಿಣಾಮ ಹರೀಶ ಗುನಗಾ ಅಘನಾಶಿನಿ ನದಿಗೆ ಬಿದ್ದರು. ಮಧ್ಯಾಹ್ನವಾದರೂ ಅವರು ಮನೆಗೆ ಬರದ ಕಾರಣ ಕುಟುಂಬದವರು ಹುಡುಕಾಟ ನಡೆಸಿದರು. ಸಂಜೆ ವೇಳೆ ನದಿ ಅಂಚಿನಲ್ಲಿ ಅವರ ಶವ ಸಿಕ್ಕಿತು.
ಈ ಬಗ್ಗೆ ಹರೀಶ ಅವರ ಪುತ್ರ ವಿವೇಕ ಗುನಗಾ ಪೊಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಾದ ನಂತರ ಶವ ಪಡೆದರು.