ಹಳಿಯಾಳ: ಮಂಗಳವಾಡ ವಿಠ್ಠಲ ಪಾಟೀಲ (70 ವರ್ಷ) ಎಂಬಾತರು ತನ್ನ ಮಗ ಪರಶುರಾಮ ಪಾಟೀಲ (35 ವರ್ಷ) ಬೈಕಿನಿಂದ ಬೀಳಿಸಿ ಗಾಯ ಮಾಡಿದ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.
ಜೂ 21ರಂದು ಹವಗಿಯಿಂದ ಹಳಿಯಾಳ ಪಟ್ಟಣಕ್ಕೆ ಪರಶುರಾಮ ಪಾಟೀಲ್ ಎಂಬಾತ ತನ್ನ ತಂದೆ ವಿಠ್ಠಲ ಪಾಟೀಲರನ್ನು ಬೈಕ್ ಮೇಲೆ ಕೂರಿಸಿಕೊಂಡು ಬರುತ್ತಿದ್ದ. ಐಬಿ ತಿರುವಿನ ಹೊಂಡಾ ಶೋ ರೂಂ ಎದುರು ಬೈಕ್ ಸ್ಕಿಡ್ ಆಗಿ ಬಿದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದರು. ಮಗ ನಿರ್ಲಕ್ಷö್ಯತನದಿಂದ ಬೈಕ್ ಓಡಿಸಿರುವುದೇ ಈ ಅಪಘಾತಕ್ಕೆ ಕಾರಣ ಎಂಬುದು ವಿಠ್ಠಲ ಪಾಟೀಲರ ಆರೋಪ. `ಆತನ ನಿರ್ಲಕ್ಷö್ಯದಿಂದ ತನ್ನ ಹಣೆಗೆ ಗಾಯವಾಗಿದೆ. ಜೊತೆಗೆ ಬೈಕ್ ಸಹ ಜಖಂ ಆಗಿದೆ’ ಎಂದು ಮಗನ ವಿರುದ್ಧ ವಿಠ್ಠಲ ಪಾಟೀಲ್ ಪೊಲೀಸರಿಗೆ ದೂರು ನೀಡಿದ್ದಾರೆ.
Discussion about this post