6 Skip to content

ಪೊಲೀಸರಿಗೆ ಗುದ್ದಿದ ಸರ್ಕಾರಿ ಬಸ್ ಚಾಲಕ

ಭಟ್ಕಳ: ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ಮೂವರು ಪೊಲೀಸರ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಬಸ್ ಹಾಯಿಸಿದ್ದು, ಇದರಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ಜೂ 21ರ ರಾತ್ರಿ 8.30ರ ಸುಮಾರಿಗೆ ಪೊಲೀಸ್ ಸಿಬ್ಬಂದಿ ಕೃಷ್ಣ ಗುಡ್ಡಪ್ಪ, ಕಿರಣಕುಮಾರ ಜಿ ನಾಯ್ಕ, ಸುರೇಶ ಪಟಗಾರ ಸಾಗರ ರೋಡ್ ಬಳಿಯ ಪೊಲೀಸ್ ಕ್ವಾಟರ್ಸ ಬಳಿಯ ಕಚ್ಚಾರಸ್ತೆ ಅಂಚಿನಲ್ಲಿ ಮಾತನಾಡುತ್ತ ನಿಂತಿದ್ದರು. ಆಗ, ಅಡ್ಡಾದಿಡ್ಡಿಯಾಗಿ ಕೆಎಸ್‌ಆರ್‌ಟಿಸಿ ಬಸ್ ಚಲಾಯಿಸಿಕೊಂಡು ಬಂದ ಬೀಮಣ್ಣ ಜಗ್ಗಲ್ಲವರ್ ಎಂಬಾತ ಬಸ್ ಗುದ್ದಿ ಪರಾರಿಯಾಗಿದ್ದಾನೆ. ಬಸ್ ಡಿಕ್ಕಿ ಆಗಿದ್ದರಿಂದ ಪೊಲೀಸ್ ಸಿಬ್ಬಂದಿ ಕಿರಣಕುಮಾರ ಜಿ ನಾಯ್ಕ ಹಾಗೂ ಸುರೇಶ ಪಟಗಾರ ಗಾಯಗೊಂಡಿದ್ದಾರೆ. ಈ ಇಬ್ಬರಿಗೂ ಹೊಟ್ಟೆ, ಕಾಲು, ಹಣೆ, ಬುಜಕ್ಕೆ ಭಾರೀ ಪ್ರಮಾಣದಲ್ಲಿ ಗಾಯವಾಗಿದೆ. ಕೃಷ್ಣ ಗುಡ್ಡಪ್ಪ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಇದಾದ ನಂತರ ಚಾಲಕ ಬಸ್ಸನ್ನು ಸ್ಥಳದಲ್ಲಿ ನಿಲ್ಲಿಸದೇ ಮುಂದೆ ಹೋಗಿದ್ದು, ಸ್ವಲ್ಪ ದೂರದಲ್ಲಿ ಬಸ್ ನಿಲ್ಲಿಸಿ ಪರಾರಿಯಾಗಿದ್ದಾನೆ.

 

Leave a comment

Leave a Reply

You cannot copy content of this page