ಮುoಡಗೋಡ: ಫೇಸ್‌ಬುಕ್‌ನಲ್ಲಿ ಬಂದಿದ್ದ ಸಾಲದ ಜಾಹೀರಾತು ನಂಬಿ ಬೆಡಸಗಾಂವ ಗ್ರಾಮದ ಅಶೋಕ ರಾಮ ನಾಯ್ಕ 80 ಸಾವಿರ ರೂ ಕಳೆದುಕೊಂಡಿದ್ದಾರೆ.
ಜೀವನ್ ಸಮೃದ್ಧಿ ಫೈನಾನ್ಸ್ ವೈಯಕ್ತಿಕ ಸಾಲದ ಜಾಹಿರಾತು ನೋಡಿ, ಸಾಲ ಪಡೆಯಲು ಫೇಸ್‌ಬುಕ್‌ನಲ್ಲಿಯೇ ಮಾಹಿತಿ ಪಡೆದು ಅರ್ಜಿ ಭರ್ತಿ ಮಾಡಿದ ಆತನಿಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ 15 ಲಕ್ಷ ಸಾಲ ಮಂಜೂರಿಯಾಗಿದೆ ಎಂಬ ಸಂದೇಶ ಬಂದಿದೆ. ಇದರ ಜೊತೆ ಕೇಂದ್ರ ಸರ್ಕಾರದ ಪ್ರತಿಗಳು ದೊರೆತಿವೆ. ಆದರೆ, ಅವೆಲ್ಲವೂ ನಕಲಿ.
ಸಾಲ ಮಂಜೂರು ಮಾಡಲು ಮೊದಲಿಗೆ 5 ಸಾವಿರ ರೂ ತುಂಬಲು ಹೇಳಿದ ದುಷ್ಕರ್ಮಿಗಳು ಫೋನ್ ಪೇ ಸ್ಕ್ಯಾನರ್ ಕಳುಹಿಸಿದ್ದಾರೆ. ಇದನ್ನು ನಂಬಿ 5 ಸಾವಿರ ರೂ ಫೋನ್ ಪೇ ಮಾಡಿದ ನಂತರ 2ನೇ ಕಂತು ಎಂದು 20 ಸಾವಿರ, ನಂತರ ಮತ್ತೆ 5 ಸಾವಿರ ಎಂದು ಪುಸಲಾಯಿಸಿ ಒಟ್ಟು 80 ಸಾವಿರ ರೂ ಪಡೆದಿದ್ದಾರೆ. ನಂತರ ಅಶೋಕ ಫೋನ್ ಮಾಡಿದರೆ ನಂ ಬ್ಲಾಕ್ ಮಾಡಿದ್ದಾರೆ. ಆ ನಂತರ ಅವರು ಕಳುಹಿಸಿದ್ದ ದಾಖಲೆ ಎಲ್ಲವೂ ನಕಲಿ ಎಂದು ಗೊತ್ತಾಗಿದೆ.
Discussion about this post