ಯಲ್ಲಾಪುರ: ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಜಡಗಿನಕೊಪ್ಪದ ಫೀಲಿಪ್ ಕೃಷ್ಣ ಸಿದ್ದಿ (27) ಎಂಬಾತ ಬೈಕ್ ಕಳ್ಳತನ ಆರೋಪದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
2024ರ ಮಾರ್ಚ 1ರಂದು ಕುಂದರಗಿ ಬಳಿ ಮಜ್ಜಿಗೆಹಳ್ಳದ ಲಕ್ಷಣ ದೋಯಿಪಡೆ ಎಂಬಾತರ ಬೈಕ್ ಕಳ್ಳತನ ನಡೆದಿತ್ತು. ಈ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಫೀಲಿಪ್ ಕೃಷ್ಣ ಸಿದ್ದಿ ಎದುರಾಗಿದ್ದ. ಈತ ಈ ಹಿಂದೆ ದರೋಡೆ, ಅಪ್ರಾಪ್ತೆಯರ ಮೇಲಿನ ಅತ್ಯಾಚಾರ, ಅಡಿಕೆ ಕಳ್ಳತನ, ಬೈಕ್ ಕಳ್ಳತನ ಸೇರಿ 10ಕ್ಕೂ ಅಧಿಕ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾದವನೂ ಆಗಿದ್ದ. ಆತನನ್ನು ವಶಕ್ಕೆ ಪಡೆದ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದ್ದರು. ಆಗ, ಆತ ಲಕ್ಷö್ಮಣ ದೋಯಿಪಡೆ ಅವರ ಬೈಕಿನ ಜೊತೆ ಮುಂಡಗೋಡದಲ್ಲಿ ಎರಡು ಬೈಕ್ ಸಹ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನ ಬಳಿಯಿದ್ದ ಬೈಕುಗಳನ್ನು ಇದೀಗ ವಶಕ್ಕೆ ಪಡೆಯಲಾಗಿದೆ.
Discussion about this post