ಕೋಟಿ ರೂ ಮೌಲ್ಯದ ಭೂಮಿಯನ್ನು ಸರ್ಕಾರಿ ಶಾಲೆಗೆ ನೀಡುವ ಮೂಲಕ ಭಟ್ಕಳದ ಉದ್ಯಮಿ ಮಾಧವ ನಾಯ್ಕ ತಮ್ಮ ಶೈಕ್ಷಣಿಕ ಪ್ರೀತಿಯನ್ನು ತೋರಿಸಿದ್ದಾರೆ. ಶಾಲೆಯ ಉಳುವಿಗಾಗಿ ಅವರು ತಾವು ಈ ಹಿಂದೆ ಖರೀದಿಸಿದ್ದ 4.4 ಗುಂಟೆ ಭೂಮಿಯನ್ನು ಸರ್ಕಾರದ ಹೆಸರಿಗೆ ಬರೆದುಕೊಟ್ಟಿದ್ದಾರೆ.
ಬೆಳಕೆ ನೂಜ ಮಜಿರೆಯ ಹೆರ್ಬುಡ್ಕಿ ಸರಕಾರಿ ಶಾಲೆಗೆ ಸೂಕ್ತ ಸ್ಥಳಾವಕಾಶ ಇರಲಿಲ್ಲ. ಶಾಲೆ ಉಳುವಿಗಾಗಿ ಸರಿಯಾದ ಜಾಗಬೇಕು ಎಂದು ಬಹು ವರ್ಷಗಳಿಂದ ಜನ ತಡಕಾಡುತ್ತಿದ್ದರು. ಶಾಲೆ ಪಕ್ಕದಲ್ಲಿ ಕೆಲ ವರ್ಷಗಳ ಹಿಂದೆ ಮನೆ ಕಟ್ಟುವುದಕ್ಕಾಗಿ ಭೂಮಿ ಖರೀದಿಸಿದ್ದ ಮಾಧವ ನಾಯ್ಕ ಅದೇ ಭೂಮಿಯನ್ನು ಇದೀಗ ಶಾಲೆಗೆ ದಾನವಾಗಿ ನೀಡಿದ್ದಾರೆ.
ಬೆಳಕೆಯ ಕಲಬಂಡಿಯ ಮಾದೇವ ನಾಯ್ಕ ಶಾಲೆಗೆ ಅಗತ್ಯವಿರುವ ಭೂಮಿಯನ್ನು ಶಾಲೆಯ ಹೆಸರಿಗೆ ಪಹಣಿ ಮಾಡಿಕೊಟ್ಟಿದ್ದಾರೆ. ಪಹಣಿ ಮಾಡಲು ತಗಲುವ ವೆಚ್ಚವನ್ನು ಸಹ ಅವರೇ ಭರಿಸಿದ್ದಾರೆ. 1992ರಲ್ಲಿ ಶುರುವಾದ ಈ ಶಾಲೆಯಲ್ಲಿ 1ರಿಂದ 5ನೇ ತರಗತಿಯ ಮಕ್ಕಳಿದ್ದಾರೆ. ಪ್ರಸ್ತುತ 25 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮಾಧವ ನಾಯ್ಕ ಉತ್ತಮ ಕೃಷಿಕರು. ಜೊತೆಗೆ ಹೋಟೆಲ್ ಉದ್ಯಮಿಯೂ ಹೌದು. ಒಂದಷ್ಟು ಕಟ್ಟಡಗಳನ್ನು ಬಾಡಿಗೆಗೆ ನೀಡಿ ಬದುಕು ಕಟ್ಟಿಕೊಂಡಿದ್ದಾರೆ.
Discussion about this post