ಶನಿವಾರ ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ಶಾಲೆಗಳಿಗೆ ಭೇಟಿ ನೀಡಿದ ಶಾಸಕ ಭೀಮಣ್ಣ ನಾಯ್ಕ ಶಾಲಾ ಅಭಿವೃದ್ಧಿಗೆ ನೆರವು ನೀಡುವುದಾಗಿ ಘೋಷಿಸಿದರು.
ಸಿದ್ದಾಪುರದಲ್ಲಿನ ಚುಟುಕು ಬ್ರಹ್ಮ ದಿನಕರ ದೇಸಾಯಿಯವರ ಕನಸಿನ ಕೂಸಾದ ಜನತಾ ವಿದ್ಯಾಲಯ ಬೇಡ್ಕಣಿಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಹೇಳಿದ್ದಾರೆ. `ದಿನಕರ ದೇಸಾಯಿಯವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಬೇಡ್ಕಣಿ ಸುತ್ತಮುತ್ತಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೌಢಶಿಕ್ಷಣದ ಧಾರೆ ಎರೆಯುವ ಮೂಲಕ ಭವಿಷ್ಯಕ್ಕೆ ಬೆಳಕಾಗಿದ್ದಾರೆ. ಸಂಘ-ಸAಸ್ಥೆ ಜತೆಗೆ ಸಮಾಜ ಕೂಡ ಶಿಕ್ಷಣ ಕೊಡಿಸಲು ಮುಂದೆ ಬರಬೇಕು. ಬೇಡ್ಕಣಿ ಶಾಲೆಯ ಅಭಿವೃದ್ಧಿಗೆ ನನ್ನಿಂದಾದ ಸಹಕಾರ ನೀಡುತ್ತೇನೆ’ ಎಂದರು.
ಶಿರಸಿಯ ಕೆಂಚಗದ್ದೆ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು ಶಿಥೀಲಗೊಂಡಿರುವ ಶಾಲಾ ಕಟ್ಟಡವನ್ನು ವೀಕ್ಷಿಸಿದರು. `ಮಳೆಗೆ ಶಾಲೆಯ ಒಂದು ಕಟ್ಟಡ ಸಂಪೂರ್ಣ ಶೀಥಿಲಗೊಂಡಿದ್ದರಿAದ ಮಕ್ಕಳನ್ನು ಪಕ್ಕದ ಕಟ್ಟಡಕ್ಕೆ ಸ್ಥಳಾಂತರಿಸಬೇಕು’ ಎಂದು ಸೂಚಿಸಿದರು. ಜೊತೆಗೆ ತಮ್ಮ ಅನುದಾನದಲ್ಲಿ ಶಾಲೆಗೆ ಹೊಸ ಕಟ್ಟಡ ನೀಡುವುವುದಾಗಿ ಭರವಸೆ ನೀಡಿದರು.
Discussion about this post