ಜೊಯಿಡಾದಲ್ಲಿ ನಡೆದ ರಾಷ್ಟಮಟ್ಟದ ಕಯಾಕಿಂಕ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾ ವಿಜೇತರಿಗೆ ಅನ್ಯಾಯವಾದ ಬಗ್ಗೆ ದೂರು ಕೇಳಿಬಂದಿದೆ. ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದವರಿಗೆ ಸಂಘಟಕರು ಅದನ್ನು ವಿತರಿಸದೇ ನುಣಚಿಕೊಂಡಿದ್ದಾರೆ.
ಈ ಸ್ಪರ್ಧೆಗೆ ಭಾಗವಹಿಸಲು ವಿವಿಧ ಭಾಗಗಳಿಂದ ಸ್ಪರ್ಧಾಳುಗಳು ಬಂದಿದ್ದರು. ಮಧ್ಯಪ್ರದೇಶದಿಂದ ಬಂದ ಎರಡು ಅಸೋಸಿಯೇಷನ್’ನವರ ಪೈಕಿ ಒಂದು ಅಸೋಸಿಯೇಷನ್‌ಗೆ ಪದಕ ವಿತರಿಸಲಾಗಿದೆ. ಹೀಗಾಗಿ ಇನ್ನೊಂದು ತಂಡದವರು ವೇದಿಕೆ ಏರಿ ಗಲಾಟೆ ಮಾಡಿದ್ದಾರೆ. ಆಗ, ಅಲ್ಲಿದ್ದ ಸಂಘಟಕರು ಗಲಾಟೆ ಮಾಡಿದವರನ್ನು ಸಮಾಧಾನ ಮಾಡಲು, ಈ ಮೊದಲು ಪದಕ ಪಡೆದಿದ್ದ ಸ್ಥಳೀಯ ಸ್ಪರ್ಧಿಗಳಿಂದ ಪದಕ ಹಿಂಪಡೆದು ಅದನ್ನು ಮಧ್ಯಪ್ರದೇಶದ ಇನ್ನೊಂದು ತಂಡಕ್ಕೆ ನೀಡಿದ್ದಾರೆ. ಇದರಿಂದ ಸ್ಥಳೀಯ ಸ್ಪರ್ಧಿಗಳಿಗೆ ಅನ್ಯಾಯವಾಗಿದೆ. ಇದೆಲ್ಲದರ ಜೊತೆ ಸ್ಪರ್ಧೆಗೆ ಆಯ್ಕೆ ಪ್ರಕ್ರಿಯೆ ಸಹ ಸರಿಯಾಗಿ ನಡೆದಿಲ್ಲ ಎಂಬ ಆರೋಪ ಕೇಳಿಬಂದಿದೆ.
ಸುಪಾ ವಾಟರ್ ಎಕ್ಟಿವಿಟಿಸ್ ಸಂಘದ ಅಧ್ಯಕ್ಷ ಚಾಂದ್ ಕುಟ್ಟಿ ಮಾತನಾಡಿ `ಬೇರೆಯವರನ್ನು ಸುಮ್ಮನಿರಿಸಲು ನಿಜವಾಗಿ ಪದಕ ಗೆದ್ದವರಿಗೆ ಅನ್ಯಾಯ ಮಾಡಲಾಗಿದೆ. ಕಷ್ಟ ಪಟ್ಟು ಗೆದ್ದವರಿಗೆ ಪದಕ ನೀಡದೇ, ಜಗಳ ಮಾಡಿದವರಿಗೆ ಪದಕ ನೀಡಿರುವುದು ಖಂಡನೀಯ’ ಎಂದರು.
Discussion about this post