ಮುಂಡಗೋಡದ ಅಂಗನವಾಡಿಯಲ್ಲಿ ಖಾಲಿಯಿರುವ ಹುದ್ದೆಯೊಂದಕ್ಕೆ ಕಾಂಗ್ರೆಸ್ ನಾಯಕಿ 50 ಸಾವಿರ ರೂ ಬೇಡಿಕೆ ಇಟ್ಟಿರುವ ಆಡಿಯೋ ಇದೀಗ ವೈರಲ್ ಆಗಿದೆ. ಮಾರಿಕಾಂಬಾ ನಗರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಅಂಗನವಾಡಿಯಲ್ಲಿ ಅಡುಗೆ ಸಹಾಯಕಿ ಹುದ್ದೆ ಖಾಲಿ ಇದ್ದು, ಅನೇಕರು ಅದಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಪ ಪಂ ಸದಸ್ಯೆಯೂ ಆಗಿರುವ ಕಾಂಗ್ರೆಸ್ ನಾಯಕಿ ಬಿ ಬಿ ಜಾನ್ ಮಲ್ಲನ್ನವರ್ ಎಂಬಾಕೆಯದು ಎನ್ನಲಾದ ಆಡಿಯೋ ಭಾರೀ ಪ್ರಮಾಣದಲ್ಲಿ ವೈರಲ್ ಆಗುತ್ತಿದೆ.
`ಕೆಲಸ ಆಗಿಲ್ಲ ಎಂದರೆ ಕೊಟ್ಟ ದುಡ್ಡು ವಾಪಸ್ ಕೊಡುತ್ತೇನೆ. ಇದೀಗ ಮಾತು ಆಡಿದಂತೆ ದುಡ್ಡು ಕೊಡಿ, ಪೆಪರ್ ರೆಡಿ ಮಾಡಿಸಿಕೊಡುತ್ತೇನೆ’ ಎಂದು ಆಕೆ ಹೇಳಿದ್ದಾಳೆ. ಆಗ ಅರ್ಜಿದಾರರು `ನಿಮಗೆ ಖುಷಿಗೆ 2 ಸಾವಿರ ಕೊಡುವೆ’ ಎಂದು ಹೇಳಿದ್ದು, `ಈ ಹಣ ತನಗೆ ಬೇಡ, ಬೇರೆಯವರಿಗೆ ಕೊಡಲು ಬೇಕು’ ಎಂದು ಕಾಂಗ್ರೆಸ್ ನಾಯಕಿ ಆಡಿಯೋದಲ್ಲಿ ಹೇಳಿದ್ದಾಳೆ. `ಒಂದು ದಿನ ಒಳಗೆ ಹಣ ವ್ಯವಸ್ಥೆ ಮಾಡಿ. ಯಾರೂ ಬೇಗ ಹಣ ಕೊಡುತ್ತಾರೆಯೋ ಅವರಿಗೆ ಕೆಲಸ ಪಕ್ಕಾ’ ಎಂದಿರುವ ಆಡಿಯೋ ಇದಾಗಿದೆ.
Discussion about this post