ಭಟ್ಕಳದ ಶ್ರೀರಾಮ ಫೈನಾನ್ಸಿನಲ್ಲಿನ ಹಣ ದುರುಪಯೋಗಪಡಿಸಿಕೊಂಡು ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ಕುಂದಾಪುರದ ರಾಘವೇಂದ್ರ ರಾಜೀವ ಸ್ವಾಮಿ ಇದೀಗ ಪೊಲೀಸ್ ಬಲೆಗೆ ಬಿದ್ದಿದ್ದು, ಆತನನ್ನು ಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸಲಾಗಿದೆ.
ಈ ಪ್ರಕರಣಕ್ಕೆ ಸಂಬoಧಿಸಿದoತೆ ಕಳೆದ ವಾರ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಫೈನಾನ್ಸಿನಲ್ಲಿ ಸಾಲ ಪಡೆದ ಸಾಲಗಾರರೂ ಸಾಲ ತೀರಿಸದೇ ಇದ್ದರೂ ಅವರಿಗೆ ಚುಕ್ತಾ ಪ್ರಮಾಣಪತ್ರ ನೀಡಿ, ನಕಲಿ ದಾಖಲೆಗಳನ್ನು ಆರೋಪಿಗಳು ಸೃಷ್ಠಿಸಿದ್ದರು. ನಂತರ ಶ್ರೀರಾಮ ಫೈನಾನ್ಸಿಗೆ ಮೋಸ ಮಾಡಿ, ಆ ವಾಹನಗಳನ್ನು ಬೇರೆಯವರಿಗೆ ಮಾರಿದ ಹಣವನ್ನು ತಾವು ಬಳಸಿಕೊಂಡಿದ್ದರು. ಆ ಮೂಲಕ ಕಂಪನಿ ಜೊತೆ ಗ್ರಾಹಕರಿಗೂ ವಂಚಿಸಿದ್ದರು. ಇದಲ್ಲದೇ, ಸಾಲಗಾರರು ಪಾವತಿಸಿದ ಹಣವನ್ನು ಫೈನಾನ್ಸಿಗೆ ತುಂಬದೇ ತಾವೇ ಇರಿಸಿಕೊಂಡಿದ್ದರು. ಒಟ್ಟೂ 89.79.524 ರೂ ಹಣ ಅವ್ಯವಹಾರ ನಡೆದ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು.
Discussion about this post