ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲಕ ತೇಜಸ್ವಿ ನಾಯ್ಕ ಅವರು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.
ಈ ಹಿಂದೆ ಮಧ್ಯಪ್ರದೇಶದ ಕೆಡಾರ್’ನಲ್ಲಿ ಅವರು ಐಎಎಸ್ ಅಧಿಕಾರಿಯಾಗಿದ್ದರು. ತೇಜಸ್ವಿ ನಾಯ್ಕ ಅವರು ಕೃಷಿ ಸಚಿವ ಅರ್ಜುನ್ ಮಂಡಾ ಅವರಿಗೆ ಆಪ್ತ ಕಾರ್ಯದರ್ಶಿ ಆಗಿ ಅನುಭವ ಹೊಂದಿದ್ದಾರೆ. ನರೇಂದ್ರ ಮೋದಿ ಅವರ ಸಂಪುಟದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿದ್ದು, ಅವರ ಆಪ್ತ ಕಾರ್ಯದರ್ಶಿಯಾಗಿ ತೇಜಸ್ವಿ ನಾಯ್ಕ ಅವರು ಕೇಂದ್ರ ಕೈಗಾರಿಕೆ ಇಲಾಖೆಯ ಜವಾಬ್ದಾರಿ ಹೊಂದಿದ್ದಾರೆ.
ಬಾಲ್ಯದಿಂದಲೂ ವೈದ್ಯನಾಗಬೇಕು ಎಂದು ಕನಸು ಕಂಡಿದ್ದ ಅವರಿಗೆ ಅದು ಸಾಧ್ಯವಾಗಿರಲಿಲ್ಲ. ಆದರೆ, 2008ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಐಎಎಸ್ ಅಧಿಕಾರಿಯಾದರು. ಭ್ರಷ್ಟ ಹಾಗೂ ಅಸಂಬoದ್ಧ ನಡವಳಿಕೆಯ ಅಧಿಕಾರಿಗಳ ವಿರುದ್ಧ ಸಾಕಷ್ಟು ಬಾರಿ ಅವರು ಅಬ್ಬರಿಸಿದ್ದರು. ರಾಜಕಾರಣಿಗಳ ಅಡ್ಡಹಾದಿಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರಿಂದ ಕೆಲವರು ಇವರ ವಿರುದ್ಧ ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಕೆಲ ಶಾಸಕರು ಇವರನ್ನು ಎದುರು ಹಾಕಿಕೊಂಡಿದ್ದರು. ತಮ್ಮ ಆಡಳಿತದ ಅವಧಿಯಲ್ಲಿ ಸಾಕಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದರಿoದ ಅವರು ವಿವಾದಗಳಿಗೆ ಸಿಲುಕಿದ್ದರು.
ತೇಜಸ್ವಿ ಅವರ ಪತ್ನಿ ಮೀನಾ ಸಹ ಐಎಸ್ ಅಧಿಕಾರಿಯಾಗಿದ್ದು, ಇಬ್ಬರು ವೃತ್ತಿ ಜೀವನದಲ್ಲಿ ಸಂಪರ್ಕಕ್ಕೆ ಬಂದು ಪ್ರೀತಿಸಿ 2014ರಲ್ಲಿ ಮದುವೆಯಾದವರು.
Discussion about this post