ಸಂಸ್ಕೃತ ಅರಿತರೆ ಭಾರತೀಯ ಸಂಸ್ಕೃತಿ ಅರ್ಥವಾಗುತ್ತದೆ’ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ.
ಜಗತ್ತಿನ ಜ್ಞಾನಕ್ಕೆ ಭಾರತದ ಪುಸ್ತಕ ಕೊಡುಗೆ ವಿಚಾರವಾಗಿ ಮಾತನಾಡಿದ ಅವರು `ಸಂಸ್ಕೃತ ಉಳಿದರೆ ಭಾರತೀಯ ಸಂಸ್ಕೃತಿ ಉಳಿಯುತ್ತದೆ. ಭಾರತದ ಸಂಸ್ಕೃತ ಹಾಗೂ ಸಂಸ್ಕೃತಿಗಳ ಅಧ್ಯಯನ ಮಾಡಿದರೆ ಉಳಿದ ಕ್ಷೇತ್ರದ ಸಂಶೋಧನೆ, ಅಧ್ಯಯನ ಸಹಕಾರಿ ಎಂದು ಹೇಳಿದ್ದಾರೆ. `ವೇದಾಂತ ಪರಂಪರೆಯು ಭಾರತೀಯರಿಗೆ ಪರಂಪರೆಯ ಕೆನೆ, ಕೊನೆ, ತೆನೆ ಹೌದು. ಅಂತ ಕೆನೆಯ ಜಿಲ್ಲೆ ಉತ್ತರ ಕನ್ನಡವಾಗಿದ್ದು, ಇಲ್ಲಿನ ಗ್ರಾಮಗಳಲ್ಲಿ ಪಾಂಡಿತ್ಯ ಉಳ್ಳವರು ಇದ್ದಾರೆ. ಅವರ ಮೂಲಕ ಇತಿಹಾಸ ಅರಿತು ಯುವ ಜನ ಮುನ್ನಡೆಯಬೇಕು. ಸಂಸ್ಕೃತಿ ಹಾಗೂ ಸಂಸ್ಕೃತ ಉಳಿಸಬೇಕು ಎಂದು ಹಿರಿಯ ವಿದ್ವಾಂಸ ರಾಮಚಂದ್ರ ಭಟ್ಟ ಕೋಟೆಮನೆ ಈ ವೇಳೆ ಅಭಿಪ್ರಾಯಪಟ್ಟಿದ್ದಾರೆ.
Discussion about this post