ಕಾರವಾರದ ಬೈತಕೋಲ್ ಸಮುದ್ರ ಮಾಲಿನ್ಯಕ್ಕೆ ಕಾರಣನಾಗುತ್ತಿದ್ದ ವ್ಯಕ್ತಿಯನ್ನು ಅರಬ್ಬಿ ಸಮುದ್ರ ಬಲಿ ಪಡೆದಿದೆ. ತಾವು ಮಾಲಿನ್ಯ ಮಾಡಲು ಉದ್ದೇಶಿಸಿದ ನೀರಿನಲ್ಲಿಯೇ ಮುಳುಗಿ ಸುರೇಶ ಪಾಟೀಲ್ ಎಂಬಾತರು ಸಾವನಪ್ಪಿದ್ದಾರೆ.
ಕಾರವಾರ ನಗರಸಭೆಯೂ ಬಯಲು ಮಲ ವಿಸರ್ಜನೆಯನ್ನು ನಿಷೇಧಿಸಿದೆ. ಬಯಲು ಮಲ ವಿಸರ್ಜನೆ ಮಾಡದಂತೆ ಸಾಕಷ್ಟು ಜನ ಜಾಗೃತಿಯನ್ನು ನಡೆಸುತ್ತಿದೆ. ಈ ಪ್ರಕ್ರಿಯೆಯಿಂದ ವಿವಿಧ ರೋಗಗಳು ಹರಡುವ ಬಗ್ಗೆ ಅರಿವು ಮೂಡಿಸುತ್ತಿದೆ. ಅದಾಗಿಯೂ ಸುರೇಶ ಪಾಟೀಲ್ ನಿತ್ಯವೂ ಸಮುದ್ರಕ್ಕೆ ಹೋಗಿ ಮಲ ವಿಸರ್ಜನೆ ಮಾಡುತ್ತಿದ್ದರು. ಏಪ್ರಿಲ್ 1ರಂದು ಮಲ ವಿಸರ್ಜನೆಗಾಗಿ ಬೈತಕೋಲ್ ಸಮುದ್ರದ ಬಳಿ ಹೋದ ಅವರು ನೀರಿನಲ್ಲಿ ಬಿದ್ದು ಸಾವನಪ್ಪಿದರು.
87 ವರ್ಷದ ಸುರೇಶ ಪಾಟೀಲ್ ವ್ಯಾಪಾರಿಯಾಗಿದ್ದರು. ಕಳೆದ ಮೂರು ತಿಂಗಳಿನಿAದ ಹೊಟ್ಟೆನೋವಿನಿಂದ ಅವರು ಬಳಲುತ್ತಿದ್ದರು. ಪ್ರತಿ ದಿನ ಬೆಳಗ್ಗೆ ಸಮುದ್ರ ಮಾಲಿನ್ಯ ಮಾಡದೇ ಇದಿದ್ದರೆ ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಬೇರೆಯವರು ಅಸಹ್ಯಪಟ್ಟರೂ ಅದಕ್ಕೆ ತಲೆಕೆಡಿಸಿಕೊಳ್ಳದೇ ಅವರು ಸಮುದ್ರದ ನೀರು ಹಾಳು ಮಾಡುತ್ತಿದ್ದರು. ಸಾಕಷ್ಟು ಜನ ಬುದ್ದಿ ಹೇಳಿದರೂ ಆ ಬಗ್ಗೆ ಸುರೇಶ ಪಾಟೀಲ ತಲೆಕೆಡಿಸಿಕೊಂಡಿರಲಿಲ್ಲ.
ಏಪ್ರಿಲ್ 1ರಂದು ಅವರು ಬೈತಕೋಲ್ ಬ್ರೆಕ್‌ವಾಟರ್ ಕಡೆ ಹೊರಟರು. ಅಲ್ಲಿಂದ ಅವರು ಜೀವಂತವಾಗಿ ಮನೆಗೆ ಮರಳಲಿಲ್ಲ. ಕಾಲು ಜಾರಿ ಸಮುದ್ರಕ್ಕೆ ಬಿದ್ದು ಸಾವನಪ್ಪಿದರು.