6

ಮುತ್ತಪ್ಪ ರೈ ಪುತ್ರನ ಮೇಲೆ ಹಲ್ಲೆ ಪ್ರಯತ್ನ: ಕುಟುಂಬದವರ ಬೆಂಬಲಕ್ಕೆ ನಿಂತ ಜಯ ಕರ್ನಾಟಕ!

ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. `ದುಷ್ಕರ್ಮಿಗಳನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಿ’ ಎಂದು ಜಯ ಕರ್ನಾಟಕ ಯಲ್ಲಾಪುರ ಘಟಕದವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

`ಏಪ್ರಿಲ್ 18ರಂದು ರಾತ್ರಿ ರಿಕ್ಕಿ ರೈ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ರಿಕ್ಕಿ ರೈ ಅವರ ಕೊಲೆ ಪ್ರಯತ್ನ ನಡೆದಿದ್ದು, ಅವರಿಗೆ ಸರ್ಕಾರ ರಕ್ಷಣೆ ಒದಗಿಸಬೇಕು’ ಎಂದು ಜಯ ಕರ್ನಾಟಕದ ಯಲ್ಲಾಪುರ ತಾಲೂಕು ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಸರ್ಕಾರಕ್ಕೆ ಪತ್ರ ರವಾನಿಸಿದ್ದಾರೆ. `ಬಿಡದಿಯಲ್ಲಿರುವ ರಿಕ್ಕಿ ರೈ ಅವರ ಮನೆ ಮೇಲೆ ದಾಳಿ ನಡೆದಿದೆ. ಹೀಗಾಗಿ ಅವರ ಮನೆಗೂ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಯಲ್ಲಾಪುರ ತಹಶೀಲ್ದಾರ್ ಕಚೇರಿ ಎದುರು ಜಮಾಯಿಸಿದ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಈ ಬಗ್ಗೆ ಗೃಹ ಸಚಿವರು ಹಾಗೂ ರಾಜ್ಯಪಾಲರಿಗೆ ಮನವಿ ರವಾನಿಸಿದರು. ಪ್ರಮುಖರಾದ ಚೆನ್ನಪ್ಪ ಡಿ ಎಚ್, ಎ ಎಫ್ ಕಾಂಬಲೇಕರ್, ಪರಶುರಾಮ ತಿರುಕಪ್ಪನವರ್, ಸುಭಾಶ ಡಿ ಎಚ್, ಅಲೆಕ್ಸ ಸಿದ್ದಿ, ಶಾಂತರಾಮ ಸಾವಂತ, ಜೀವಾ ಕೈಟ್ಕರ್, ಸಾದಿಕ್ ಖಾಜಿ, ರಜಬಲಿ ಒಂಟಿ, ಇಮಾಮ ಕಣವಿ, ಬಾಬು ಪಾಟೀಲ, ಸಾವೇರ್ ಸಿದ್ದಿ, ಗಣಪತಿ ಶಿರನಾಳಕರ, ಅಲಿ ಖುರೇಶಿ, ಹನುಮಂತ ವಡ್ಡರ್, ಪರಶುರಾಮ ಹರಿಜನ, ಮಂಜುನಾಥ ರಾಯ್ಕರ್, ಫಾತಿಮಾ ಶೇಖ್, ಫಾತೀಮಾ ದರವೇಶ ಇತರರು ಇದ್ದರು.

  • Related Posts

    ಮಗಳ ಮದುವೆಗೆ ಪ್ರಧಾನಿ ಮೋದಿಗೆ ಆಹ್ವಾನ!

    Share this… Facebook Pinterest Twitter Linkedin Whatsappಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಗಳ ವಿವಾಹಕ್ಕೆ ಆಹ್ವಾನಿಸಿದ ಸಂಸದ ಬಸವರಾಜ ಬೊಮ್ಮಾಯಿ ನವದೆಹಲಿ: ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ…

    ಹಾವೇರಿಯಲ್ಲಿ ಕಬ್ಬು ಬೆಳೆಗಾರರ ಸಭೆ ರದ್ದು !!

    Share this… Facebook Pinterest Twitter Linkedin Whatsappಹಾವೇರಿ: ಇಂದು ನಡೆಯಬೇಕಿದ್ದ ಕಬ್ಬು ಬೆಳೆಗಾರರ ಸಭೆ ರದ್ದು; ರೈತರು ಸಭೆಗೆ ಬರುವುದು ಬೇಡ – ರೈತ ಸಂಘದ ಮನವಿ ಕರ‍್ಖಾನೆ ಮಾಲೀಕರು ಸಭೆಗೆ ಗೈರಾಗುವ ಮಾಹಿತಿ ಹಿನ್ನೆಲೆ; ರೈತ ಸಂಘದ ರಾಜ್ಯಾಧ್ಯಕ್ಷ…

    You cannot copy content of this page