ಅಂಕೋಲಾದ ತಿಮ್ಮಣ್ಣ ಹರಿಕಂತ್ರ ಮೀನುಗಾರಿಕೆಗೆ ತೆರಳಿದ ವೇಳೆ ಸಾವನಪ್ಪಿದ್ದಾರೆ.
ಅಂಕೋಲಾ ಹಿಚ್ಕಡದ ದಂಡೆಭಾಗದಲ್ಲಿ ತಿಮ್ಮಣ್ಣ ಹರಿಕಂತ್ರ (74) ಅವರು ವಾಸವಾಗಿದ್ದರು. ಅವರು ಮೀನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದರು. ಏಪ್ರಿಲ್ 28ರಂದು ತಮ್ಮ ಮನೆ ಹಿಂದಿನ ಗಂಗಾವಳಿ ನದಿಗೆ ಹೋಗಿದ್ದ ಅವರು ನೀರಿನಲ್ಲಿ ಮುಳುಗಿ ಕಲಗ ತೆಗೆಯುತ್ತಿದ್ದರು.
ಮಧ್ಯಾಹ್ನ 12 ಗಂಟೆಯಿಂದ 1.30ರವರೆಗೂ ನೀರಿನಲ್ಲಿದ್ದ ಅವರು ಏಕಾಏಕಿ ಕಣ್ಮರೆಯಾದರು. ಸಾಕಷ್ಟು ಹುಡುಕಾಟ ನಡೆಸಿದಾಗ ತಿಮ್ಮಣ್ಣ ಹರಿಕಂತ್ರ ಅವರು ಶವವಾಗಿದ್ದರು.
ಕಾರವಾರದ ಬೈತಕೋಲದ ತುಳಸಿ ಉಳ್ವೇಕರ್ ಅವರು ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.