ಪ್ರಸಿದ್ಧ ಸಾತೊಡ್ಡಿ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರ ಹುಚ್ಚಾಟ ಮಿತಿ ಮೀರಿದ್ದು, ಭಾನುವಾರ ರಾತ್ರಿಯವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಪಡ್ಡೆ ಹುಡುಗರ ಬೆವರಿಳಿಸಿದರು.
ಯಲ್ಲಾಪುರದ ಬಿಸಗೋಡು ತಿರುವಿನಲ್ಲಿ ಕಾವಲು ನಿಂತ ಪೊಲೀಸರು ಅಡ್ಡಾದಿಡ್ಡಿ ವಾಹನ ಚಲಾಯಿಸುವವರನ್ನು ತಡೆದರು. ಅವರ ಬಳಿಯಿದ್ದ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದರು. ಒಂದೇ ಬೈಕಿನಲ್ಲಿ ಮೂರು ಜನ ಸಂಚರಿಸುತ್ತಿದ್ದವರನ್ನು ತಡೆದು, ಮನೆಗೆ ಕಳುಹಿಸಿದರು. ಹೆಲ್ಮೆಟ್ ಇಲ್ಲದವರಿಗೆ ದಂಡ ವಿಧಿಸಿದರು. ಈ ಎಲ್ಲಾ ಸೇರಿ ಒಟ್ಟು 55 ಪ್ರಕರಣಗಳನ್ನು ದಾಖಲು ಮಾಡಿದ್ದು, ತಪ್ಪಿತಸ್ಥರಿಂದ 25600ರೂ ವಸೂಲಿ ಮಾಡಿದರು. ನಂತರ ಎಲ್ಲರಿಗೂ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಿದರು.
ಪ್ರವಾಸಿಗರ ಮಿತಿ ಮೀರಿದ ವರ್ತನೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಪ್ರತಿ ಭಾನುವಾರವೂ ಸಿಬ್ಬಂದಿ ನೇಮಕಕ್ಕಾಗಿ ಆ ಭಾಗದವರು ಆಗ್ರಹಿಸಿದ್ದಾರೆ.




Discussion about this post