6 Skip to content

ರಮ್ಮಿ ಆಡಿ 18 ಲಕ್ಷ ಕಳೆದುಕೊಂಡ: ಪೊಲೀಸಪ್ಪನ ವಿರುದ್ಧ ಸಿಡಿದೆದ್ದ ಪ್ರೇಯಸಿ

ಆತ ನೋಡಲು ಸುಂದರವಾಗಿದ್ದ. ವೃತ್ತಿಯಲ್ಲಿ ಪೊಲೀಸ್ ಬೇರೆ. ಆದರೆ, ಆನ್ ಲೈನ್ ಗೇಮ್ ಚಟಕ್ಕೆ ಆತ ಅಂಟಿಕೊoಡಿದ್ದರಿoದ ಇದೀಗ ಸಂಕಷ್ಟ ಅನುಭವಿಸುತ್ತಿದ್ದಾನೆ. ರಮ್ಮಿ ಆಡಿ ಹಣ ಕಳೆದುಕೊಂಡ ಕಾರಣ ಆತನ ಪ್ರೇಯಸಿಯೇ ಇದೀಗ ತಿರುಗಿ ಬಿದ್ದಿದ್ದಾಳೆ.
ಹಾಸನದ ಚನ್ನರಾಯಪಟ್ಟಣದಲ್ಲಿನ ಗಿರೀಶ್ ಎಂ ಎಸ್ ಎಂಬಾತ ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಹೀಗೆ ಪರಿಚಯವಾದ ಯುವತಿಯನ್ನು ಆತ ಓಲೈಸಿಕೊಂಡಿದ್ದ. ಆಕೆಯೂ ಪ್ರತಿಷ್ಠಿತ ಮನೆತನದವಳು. ಒಳ್ಳೆಯ ಉದ್ಯೋಗ ಸಹ ಇತ್ತು. ಅವರಿಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಹೀಗಾಗಿ ಆತ ಕೇಳಿದಾಗಲೆಲ್ಲ ಆಕೆ ಹಣ ನೀಡುತ್ತಿದ್ದಳು. ಆ ಹಣವನ್ನು ಪೂರ್ತಿಯಾಗಿ ಗಿರೀಶ್ ಜೂಜಾಟಕ್ಕೆ ಬಳಸುತ್ತಿದ್ದ. ಆದರೆ, ಒಮ್ಮೆಯೂ ಆತ ಆ ಆಟದಿಂದ ಹಣಗಳಿಸಿರಲಿಲ್ಲ.

ಪೊಲೀಸ್ ಸಿಬ್ಬಂದಿ ಗಿರೀಶ್ ಎಂ ಎಸ್

ಹೀಗಿರುವಾಗ ವರ್ಷದ ಹಿಂದೆ ಆಕೆ ಹಣ ಮರಳಿಸುವಂತೆ ಕೇಳಿದಾಗ, `ನಿನ್ನನ್ನು ಮದುವೆ ಆಗುವುದಿಲ್ಲ’ ಎಂದು ಅವಾಜು ಹಾಕಿದ್ದ. ಆಕೆ ಮೇಲಧಿಕಾರಿಗಳ ಬಳಿ ದೂರಿದ್ದರು. ಇಲಾಖೆಯ ಮಾನ ಕಾಪಾಡುವುದಕ್ಕಾಗಿ ಹಿರಿಯ ಅಧಿಕಾರಿಗಳು ಆಕೆಯನ್ನು ಸಮಾಧಾನಿಸಿ ಮನೆಗೆ ಕಳುಹಿಸಿದ್ದರು. ಆತನಿಂದ 18 ಲಕ್ಷ ರೂ ಮರಳಿಸುವ ಭರವಸೆ ನೀಡಿದ್ದರು. ಆದರೆ, ವರ್ಷ ಕಳೆದರೂ ಆಕೆಗೆ ಹಣ ಬರಲಿಲ್ಲ. ಇದರಿಂದ ನೊಂದ ಯುವತಿ ಇದೀಗ ಪೊಲೀಸಪ್ಪನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ತನಗಾದ ಅನ್ಯಾಯವನ್ನು ಹೇಳಿಕೊಂಡಿರುವ ಆಕೆ `ಇಂಥವರಿoದ ದೂರವಿರಿ’ ಎಂದು ಇತರರಿಗೂ ಸಂದೇಶ ರವಾನಿಸಿದ್ದಾಳೆ.

 

 

Leave a comment

Leave a Reply

You cannot copy content of this page