ಶುಕ್ರವಾರ ಪ್ರಕಟವಾದ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆ ಶೇ 83.21ರ ಸಾಧನೆ ಮಾಡಿದೆ. ಆ ಮೂಲಕ ರಾಜ್ಯಕ್ಕೆ 3ನೇ ಸ್ಥಾನಪಡೆದಿದೆ.
2024ನೇ ಸಾಲಿನಲ್ಲಿ 5ನೇ ಸ್ಥಾನ ಗಳಿಸಿದ್ದ ಶೈಕ್ಷಣಿಕ ಜಿಲ್ಲೆ ಈ ಬಾರಿ ಎರಡು ಸ್ಥಾನ ಏರಿಕೆಯಾಗಿದೆ. ಉತ್ತರಕನ್ನಡ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆಗೆ ಕುಳಿತ 8,890 ವಿದ್ಯಾರ್ಥಿಗಳ ಪೈಕಿ 7,397 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. 1ರಿಂದ 10ನೇ ರ್ಯಾಂಕ್ಗಳಲ್ಲಿ ಜಿಲ್ಲೆಯ ಒಟ್ಟು 77 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಉತ್ತರಕನ್ನಡ ಶೈಕ್ಷಣಿಕ ಜಿಲ್ಲೆಯಲ್ಲಿ ಶೇ 88.75 ಫಲಿತಾಂಶ ಪಡೆದಿರುವ ಭಟ್ಕಳ ಪ್ರಥಮ ಸ್ಥಾನ ಪಡೆದಿದೆ. ಬಳಿಕ ಹೊನ್ನಾವರ ಶೇ.88.70, ಕುಮಟಾ ಶೇ.82.98, ಅಂಕೋಲಾ ಶೇ. 76.07, ಕಾರವಾರ ಶೇ.76.03 ಫಲಿತಾಂಶ ಪಡೆದುಕ್ಕೊಂಡಿವೆ. ಇನ್ನು ಜಿಲ್ಲೆಯಲ್ಲಿ ಪರೀಕ್ಷೆ ಬರೆದವರ ಪೈಕಿ ಶೇ.76.72 ಗಂಡುಮಕ್ಕಳು ಹಾಗೂ ಶೇ. 89.70 ಹೆಣ್ಣುಮಕ್ಕಳು ಉತ್ತಿರ್ಣರಾಗಿದ್ದಾರೆ. ಶೇ.81.70 ನಗರ ಪ್ರದೇಶದ ವಿದ್ಯಾರ್ಥಿಗಳು, ಶೇ.84.12 ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉತ್ತಿರ್ಣರಾಗದ್ದಾರೆ. ಸರ್ಕಾರಿ ಶಾಲೆಯಲ್ಲಿ ಶೇ.86.26, ಅನುದಾನಿತ ಶಾಲೆಯಲ್ಲಿ ಶೇ.75.80, ಅನುದಾನ ರಹಿತ ಶಾಲೆಯಲ್ಲಿ ಶೇ.90.84 ಫಲಿತಾಂಶ ದಾಖಲಾಗಿದೆ.
ಭಟ್ಕಳ ತಾಲೂಕಿನ ಬೆಳಕೆಯ ಸರಕಾರಿ ಪ್ರೌಡ ಶಾಳೆಯ ತೇಜಸ್ವಿನಿ ನಾಯ್ಕ , ಕುಮಟಾ ತಾಲೂಕಿನ ಬರ್ಗಿಯ ಸರಕಾರಿ ಪ್ರೌಡ ಶಾಲೆಯ ಆಕಾಶ ಹರಿಕಾಂತ 619 ಅಂಕ ಪಡೆದು ಪ್ರಥಮ, ಹೊನ್ನಾವರ ತಾಲೂಕಿನ ನ್ಯೂ ಇಂಗ್ಲಿಷ್ ಶಾಲೆಯ ರಾಧಾ ಪೈ, ಭಟ್ಕಳದ ತೆರ್ನಮಕ್ಕಿಯ ಕರ್ನಾಟಕ ಪಬ್ಲಿಕ್ ಶಾಲೆಯ ಅಶೀತಾ ನಾಯ್ಕ 618 ಅಂಕ ಪಡೆದು ದ್ವಿತೀಯ, ಭಟ್ಕಳದ ಅಳವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ಪ್ರೌಡ ಶಾಲೆಯ ಕೌಶಿಕ್ ದೇವಾಡಿಗ, ಬೈಲೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಸ್ನೇಹಾ ನಾಯ್ಕ, ಅದೇ ಶಾಲೆ ಮೇಘಾ ನಾಯ್ಕ, ಹೊನ್ನಾವರದ ಹೊದ್ಕೆ ಶಿರೂರಿನ ಸರಕಾರಿ ಪ್ರೌಡ ಶಾಲೆಯ ರಮ್ಯ ನಾಯ್ಕ, ಕುಮಟಾದ ಹೆಗಡೆಯ ಶ್ರೀ ಶಾಂತಿಕಾOಬಾ ಹೈಸ್ಕೂಲಿನ ಯಾಮಿನಿ ಪಟಗಾರ್, ಕತಗಾಲ ಎಸ್. ಕೆ. ಪಿ ಪ್ರೌಡ ಶಾಲೆಯ ಶ್ರೀನಿಧಿ ಭಟ್ 617 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಅದರಂತೆ ಉರ್ದು ಮಾಧ್ಯಮದಲ್ಲಿ ಕುಮಟಾದ ಸಂತೆಗುಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ಸನಾ ಇಂಬ್ರಾಹಿಮ್ ಸಾಬ್ 613 ಅಂಕ ಪಡೆದು ಪ್ರಥಮ, ಕುಮಟಾದ ತೌಹೀದ್ ಪ್ರೌಡ ಶಾಲೆಯ ಆಯ್ನಾ ಮರ್ಜಿಯಾ 588 ದ್ವಿತೀಯ, ಸಂತೆಗುಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಜ್ಮಾ ಮಹಮ್ಮದ್ ಶಾ ಒಟ್ಟೂ 586 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಆಂಗ್ಲ ಮಾಧ್ಯಮ ಕುಮಟಾ ತಾಲೂಕಿನ ಗಿಬ್ ಆಂಗ್ಲ ಮಾಧ್ಯಮ ಶಾಲೆಯ ಭೂಮಿಕಾ ನಾಗರಾಜ್ ಹೆಗಡೆ 624 (ಶೇ.99.84) ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಅದರಂತೆ ಕಾರವಾರದ ಸೇಂಟ್ ಮೈಕಲ್ ಶಾಲೆಯ ರುತುಜಾ ವಿನೋದ ಪಾವುಸ್ಕರ್ 623 (ಶೇ.99.68) ಅಂಕ., ಕುಮಟಾದ ಶ್ಯಾನಭಾಗ ಕಲಭಾಗಕರ್ ಹೈಸ್ಕೂಲಿನ ಸಮೀರ್ ರವಿ ದಿವನ್ 623 (ಶೇ.99.68) ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಕಾರವಾರದ ನಿರ್ಮಲ ರಾಣಿ ಹೈಸ್ಕೂಲಿನ ನೇಹಾ ಅಣ್ವೇಕರ್ ಒಟ್ಟೂ 622 (ಶೇ.99.52), ಕುಮಟಾದ ಶ್ಯಾನಭಾಗ ಕಲಭಾಗಕರ್ ಹೈಸ್ಕೂಲಿನ ಕೃತಿಕಾ ಭಟ್ ಒಟ್ಟೂ 622 (ಶೇ.99.52), ಭಟ್ಕಳದ ಮೋರಾರ್ಜಿ ದೇಸಾಯಿ ಶಾಲೆಯ ಮನೋಹರ್ ನಾಯ್ಕ ಒಟ್ಟೂ 622 (ಶೇ.99.52) ರಷ್ಟು ಅಂಕ ಪಡೆದು ತೃತೀಯ ಸ್ಥಾನ ಪಡದುಕೊಂಡಿದ್ದಾರೆ.





