ಐಪಿಎಲ್ ಕ್ರಿಕೆಟ್ ವೇಳೆ ಬೆಟ್ಟಿಂಗ್ ಬುಕ್ಕಿಯಾಗಿ ಕೆಲಸ ಮಾಡುತ್ತಿದ್ದ ಶಿರಸಿಯ ಜಯಸೂರ್ಯ ಶೆಟ್ಟಿ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಜಯಸೂರ್ಯ ಶಟ್ಟಿ ಬುಕ್ಕಿಯಾಗಿ ಸಂಪಾದಿಸಿದ್ದ ಐ-ಫೋನ್ 15’ಅನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.
ಶಿರಸಿ ನೆಹರುನಗರದ ಕೆರೆಗುಂಡಿಯ ಜಯಸೂರ್ಯ ಶೆಟ್ಟಿ ಅವರಿಗೆ 20 ವರ್ಷ. ವಿದ್ಯಾರ್ಥಿ ಜೀವನದಲ್ಲಿಯೇ ಜೂಜಾಟ ಚಟಕ್ಕೆ ಅಂಟಿದ ಅವರು ಐಪಿಎಲ್ ಕ್ರಿಕೆಟ್ ಬುಕ್ಕಿಯಾಗಿ ಹಣಗಳಿಸುತ್ತಾರೆ. ಮೇ 6ರಂದು ಕೆರೆಗುಂಡಿ ರಸ್ತೆಯಿಂದ ಸಿರ್ಸಿಕರ್ ಪ್ಲಾಟಿಗೆ ಹೋಗುವ ರಸ್ತೆ ಅಂಚಿನಲ್ಲಿ ಆನ್‌ಲೈನ್ ಮೂಲಕ ಹಣ ಹೂಡಿಕೆ ಕೆಲಸ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದರು.
ವಿಚಾರಣೆ ವೇಳೆ ಜಯಸೂರ್ಯ ಶೆಟ್ಟಿ ಅವರು ತಾನೂ ಬುಕ್ಕಿಯಾಗಿ ಕೆಲಸ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಶಿರಸಿಯ ವೈಬವ ಕಟಗಿ ಅವರಲ್ಲಿ ಸಾವಿರ ರೂಪಾಯಿಗೆ 920ರೂ ಆಧಾರದಲ್ಲಿ ಬೆಟ್ಟಿಂಗ್ ನಡೆಸುವಾಗ ಅವರು ಸಿಕ್ಕಿ ಬಿದ್ದಿದ್ದಾರೆ. ಡಿಸಿ ಮತ್ತು ಎಚ್‌ಆರ್‌ಎಸ್ ತಂಡಗಳಿಗಾಗಿ ಅವರು ಬೆಟ್ಟಿಂಗ್ ನಡೆಸುತ್ತಿರುವುದು ಪೊಲೀಸರ ಅರಿವಿಗೆ ಬಂದಿದೆ.
ಆನ್‌ಲೈನ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ ಕಾರಣ ಜಯಸೂರ್ಯ ಶೆಟ್ಟಿ ಅವರ ಜೊತೆ ಶಿರಸಿಯ ವೈಭವ ಕಟಗಿ, ಬೆಂಗಳೂರಿನ ಹೇಮಂತ್, ಗೋವಾದ ರಾಯ, ಮಲ್ವಿನ್, ಶಿರಸಿ ಗಿಡಮಾವಿನಕಟ್ಟಾದ ವಿಜಯ ಸಾಳ, ಗೋವಾದ ಸೈಮನ್ ಹಾಗೂ ಬೆಂಗಳೂರಿನ ವಿಜಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಂತೋಷಕುಮಾರ್ ಎಂ ಈ ಐಪಿಎಲ್ ಬೆಟ್ಟಿಂಗ್ ದಂಧೆಯನ್ನು ಬೆಳಕಿಗೆ ತಂದಿದ್ದಾರೆ.