6
  • Latest
Hundreds of houses destroyed for cheap liquor: Kamaripet Sarai fights with Goan liquor!

ಅಗ್ಗದ ಮದ್ಯಕ್ಕೆ ನೂರಾರು ಮನೆ ಹಾಳು: ಗೋವಾ ಮದ್ಯದ ಜೊತೆ ಕಮರಿಪೇಟೆ ಸರಾಯಿ ಕುಸ್ತಿ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅಗ್ಗದ ಮದ್ಯಕ್ಕೆ ನೂರಾರು ಮನೆ ಹಾಳು: ಗೋವಾ ಮದ್ಯದ ಜೊತೆ ಕಮರಿಪೇಟೆ ಸರಾಯಿ ಕುಸ್ತಿ!

AchyutKumar by AchyutKumar
in ರಾಜ್ಯ
Hundreds of houses destroyed for cheap liquor: Kamaripet Sarai fights with Goan liquor!

ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಡಿಮೆ ಗುಣಮಟ್ಟದ ಕಳಪೆ ದರ್ಜೆಯ ಮದ್ಯ ಮಾರಾಟವಾಗುತ್ತಿದೆ. ಸೇವನೆಗೆ ಅಯೋಗ್ಯವಾದ ಗೋವಾ ಮದ್ಯದ ಜೊತೆ ಈಚೆಗೆ ಕಮರಿಪೇಟೆಯ ಕಳ್ಳಬಟ್ಟಿ ಸರಾಯಿ ಸಹ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ADVERTISEMENT

ಜಿಲ್ಲೆಯ ಅನೇಕ ಗೂಡಂಗಡಿ, ಡಾಬಾಗಳಲ್ಲಿ ಬೆಳಗ್ಗೆ 5 ಗಂಟೆಯ ವೇಳೆಗೆ ಮದ್ಯ ಮಾರಾಟ ಶುರುವಾಗುತ್ತದೆ. ಕಡಿಮೆ ಬೆಲೆ, ಕಳಪೆ ಗುಣಮಟ್ಟದ ಮದ್ಯ ಸೇವಿಸಿ ಅನೇಕರು ಸಾವನಪ್ಪಿದ್ದಾರೆ. ದುಡಿಯುವ ಕೈಗಳನ್ನು ಕಳೆದುಕೊಂಡ ಕುಟುಂಬದವರು ನಿರ್ಗತಿಕರಾಗುತ್ತಿದ್ದು, ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಅದಾಗಿಯೂ ಕಳಪೆ ಮದ್ಯದ ವಿರುದ್ಧ ಜನ ಜಾಗೃತರಾಗಿಲ್ಲ!

ಮಾಡಲು ಏನೂ ಕೆಲಸವಿಲ್ಲದಿದ್ದರೂ ಕೆಲವರು ಐಷಾರಾಮಿ ಕಾರುಗಳಲ್ಲಿ ತಿರುಗುತ್ತಾರೆ. ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸಿಸುತ್ತಾರೆ. ಅಂಥವರ ಆರ್ಥಿಕ ಮೂಲ ಕೆದಕಿದಾಗ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಮಾಹಿತಿ ಸಿಗುತ್ತದೆ. ಅದರಲ್ಲಿಯೂ ಮುಖ್ಯವಾಗಿ ಅಕ್ರಮ ಮದ್ಯ ಮಾರಾಟ ಹಾಗೂ ಸರಬರಾಜು ಮಾಡಿಯೇ ಕೋಟಿ ಕೋಟಿ ದುಡಿದವರು ಇದೀಗ ಸರ್ಕಾರವನ್ನೇ ಅಲ್ಲಾಡಿಸುವಷ್ಟರ ಮಟ್ಟಿಗೆ ಬೆಳೆದಿದ್ದಾರೆ.

Advertisement. Scroll to continue reading.

ವಿವಿಧ ಇಲಾಖೆ ಅಧಿಕಾರಿಗಳ ವರ್ಗಾವಣೆ-ಅಲ್ಲಲ್ಲಿ ನಡೆಯುವ ಹೊಡೆದಾಟ ಪ್ರಕರಣಗಳನ್ನು ಸಂದಾನ ಮಾಡಿಸುವಷ್ಟರ ಮಟ್ಟಿಗೆ ಪ್ರಭಾವ ಹೊಂದಿದ್ದಾರೆ. ಸಣ್ಣಪುಟ್ಟ ನೌಕರರನ್ನು ಬೆದರಿಸಿ ಬದುಕು ಕಟ್ಟಿಕೊಂಡ ಪುಡಾರಿಗಳು ಈ ದಂಧೆಯಲ್ಲಿದ್ದಾರೆ. ಹೀಗಾಗಿ ಅಕ್ರಮ ಮದ್ಯ ಮಾರಾಟಗಾರರ ಹೆಡೆಮುರಿಕಟ್ಟಲು ಸಂಬAಧಿಸಿದ ಅಧಿಕಾರಿಗಳಿಂದಲೂ ಸಾಧ್ಯವಾಗುತ್ತಿಲ್ಲ. ಆಗಾಗ ಮಾತ್ರ ಅಲ್ಲಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸುತ್ತಿದ್ದಾರೆ.

Advertisement. Scroll to continue reading.

ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಸಾವು-ನೋವಿನ ಪ್ರಕರಣಗಳಲ್ಲಿ ಬಹುತೇಕ `ಸರಾಯಿ ಮಹಿಮೆ’ ಕಾಣುತ್ತದೆ. ಮದ್ಯದ ನಶೆಯಲ್ಲಿ ಕೌಟುಂಬಿಕ ಕಲಹ, ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆ, ಹೊಡೆದಾಟ ಪ್ರಕರಣಗಳ ವರದಿಯಲ್ಲಿಯೂ ಸರಾಯಿಯ ಕಮಟು ವ್ಯಾಪಿಸಿದೆ. ಪೊಲೀಸ್ ಠಾಣೆಗೆ ಬರುವ ಬಹುತೇಕ ಹೊಡೆದಾಟ-ಬಡಿದಾಟ ಪ್ರಕರಣಗಳು ಸಹ ಅಮಲಿನಲ್ಲಿ ನಡೆದಿರುವುದಾಗಿರುತ್ತದೆ. ಹಲವು ಅಪಘಾತಗಳಿಗೂ ಮದ್ಯ ಸೇವನೆ ಕಾರಣವಾಗಿದ್ದು, ಡ್ರಿಂಕ್ & ಡ್ರೈವ್ ಪ್ರಕರಣಗಳು ಹೆಚ್ಚಾಗಿದೆ. ನಶೆಯ ಗುಂಗಿನಲ್ಲಿ ವಾಹನ ಚಲಾಯಿಸುವ ಕೆಲ ಚಾಲಕರು ತಮ್ಮ ಜೀವದೊಂದಿಗೆ ಇತರೆ ಜೀವಗಳನ್ನು ಪಣಕ್ಕೀಡುತ್ತಿದ್ದಾರೆ. ತಪಾಸಣೆ ವೇಳೆ ಸಿಕ್ಕಿ ಬೀಳುವ ಜನ ಪೊಲೀಸ್ ದಂಡ ಪಾವತಿಸಿ ಮತ್ತೆ ಮದ್ಯದ ನಶೆಯಲ್ಲಿಯೇ ವಾಹನ ಓಡಿಸುತ್ತಾರೆ.

ಮುಖ್ಯವಾಗಿ ಯುವ ಸಮುದಾಯದವರು, ವಿವಿಧ ನೌಕರರಿಯಲ್ಲಿರುವವರು ಹೆಚ್ಚಿನ ಪ್ರಮಾಣದಲ್ಲಿ ಕಳಪೆ ಗುಣಮಟ್ಟದ ಮದ್ಯದ ದಾಸರಾಗಿದ್ದಾರೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಸೇರಿ ನೆರೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ನರಳಾಡುತ್ತಿರುವ ಹಲವು ರೋಗಿಗಳು ಮದ್ಯ ಸೇವನೆಯ ಚಟ ಹೊಂದಿದ್ದಾರೆ. ಮದ್ಯ ಸೇವನೆ ಹಾನಿಕಾರಕ ಎಂದು ವೈದ್ಯರು ಹೇಳಿದರೂ ವ್ಯಸನಕ್ಕೆ ದಾಸರಾದವರು ಅದರಿಂದ ಹೊರಬರದಷ್ಟು ದೂರವುಳಿದಿದ್ದಾರೆ. ನಿತ್ಯ ಸಾವು-ಬದುಕಿನ ನಡುವೆ ಹೊರಳಾಡುವ ವ್ಯಸನಿಗಳು ಕುಟುಂಬದವರನ್ನು ಅನಾಥರನ್ನಾಗಿಸಿ ಜೀವ ಬಿಡುತ್ತಿದ್ದಾರೆ. ಈ ಎಲ್ಲದರ ಬಗ್ಗೆ ಅರಿವಿದ್ದರೂ ಅಕ್ರಮ ಮದ್ಯ ಮಾರಾಟ ತಡೆ ಯಾರಿಂದಲೂ ಸಾಧ್ಯವಾಗಿಲ್ಲ.

Previous Post

ಜಾನುವಾರು ಕಳ್ಳ ಸಾಗಾಟಕ್ಕೆ ಕೇರಳವೇ ರಾಜಮಾರ್ಗ!

Next Post

ಹಲಸಿನ ಮರ ಏರಿದ ಹೆಣ್ಣು ಕರಡಿಗೆ ದೊಡ್ಡ ಆಘಾತ!

Next Post
A big shock for a female bear who climbed a jackfruit tree!

ಹಲಸಿನ ಮರ ಏರಿದ ಹೆಣ್ಣು ಕರಡಿಗೆ ದೊಡ್ಡ ಆಘಾತ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ