ಸಿದ್ದಾಪುರ: ತಾಲೂಕಿನ ಶ್ರೀ ಮನ್ನೆಲೆಮಾವಿನ ಮಠದಲ್ಲಿ ಚಾತುರ್ಮಾಸದ ಆಚರಣೆಯು ಭಕ್ತಿ ಪೂರ್ವಕವಾಗಿ ಆರಂಭವಾಯಿತು.
ಶ್ರೀ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ವ್ಯಾಸ ಪೂಜೆಯೊಂದಿಗೆ ಚಾತುರ್ಮಾಸ ವ್ರತವನ್ನು ಸಂಕಲ್ಪಿಸಿದರು. ಶ್ರೀ ಮಠದ ಆಡಳಿತ ಮಂಡಳಿಯ ಕೋಶಾಧ್ಯಕ್ಷ ಮುರಾರ್ಜಿ ಹೊಸಮನೆ ದಂಪತಿ, ಪುರೋಹಿತ ವಿನಾಯಕ ಭಟ್ ವಾಟೆಕೊಪ್ಪ ಹಾಗೂ ವೈದಿಕರ ಸಹಕಾರದೊಂದಿಗೆ ಸೀಮೆಯ ಸಮಸ್ತ ಭಕ್ತರ ಪರವಾಗಿ ಗುರು ಪಾದುಕಾ ಪೂಜೆ, ಭಿಕ್ಷಾವಂದನೆ ಮತ್ತು ವಸ್ತ್ರ ಸಮರ್ಪಣೆ ನೆರವೇರಿಸಲಾಯಿತು.
ಸೀಮಾ ವ್ಯಾಪ್ತಿಯ ಅನೇಕ ಭಜನಾ ಮಂಡಳಿಗಳ ಮಾತೆಯರು ಮತ್ತು ಭಕ್ತಾದಿಗಳು ಶ್ರೀರಾಮರಕ್ಷಾ ಸ್ತೋತ್ರ ಪಠಣ ನಡೆಸಿದರು.