ಯಲ್ಲಾಪುರ: ಪಟ್ಟಣದ ಮಂಜುನಾಥ ನಗರದ ಕೆರೆಗುಂಡಿ ಜಮೀನಿನಲ್ಲಿ ಚರ್ಮ ಹದ ಮಾಡಲಾಗುತ್ತಿತ್ತು. ಶತಮಾನಗಳಿಂದ ಬಳಸಿಕೊಂಡು ಬಂದ ಸ್ಥಳ ಈಗ ಅತಿಕ್ರಮಣವಾಗಿದ್ದು,ಅದನ್ನು ಖುಲ್ಲಾಪಡಿಸಬೇಕೆಂದು ಅಂಬೇಡ್ಕರ ಸೇವಾ ಸಂಘ ಆಗ್ರಹಿಸಿ ಸಂಘದ ಪ್ರಮುಖರು ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಕೆರೆಗುಂಡಿ ಪ್ರದೇಶ ಸಮಾಜದ ಭಾವನಾತ್ಮಕ ಸಂಬಂಧ ಹೊಂದಿದ್ದು,ಪೂರ್ವಜರು ಚರ್ಮ ಹದಗೊಳಿಸಲು ಈ ಪ್ರದೇಶವನ್ನು ಬಳಸುತ್ತಿದ್ದರು. ಅಲ್ಲಿ ಚರ್ಮ ಹದ ಮಾಡುವ ಕುಣಿ, ಚರ್ಮ ಒಣಗಿಸುವ ಸಮತಟ್ಟಾದ ಪ್ರದೇಶ ಇತ್ತು. ಆದರೆ ಈ ಪ್ರದೇಶ ಅತಿಕ್ರಮಣ ಆಗಿದ್ದಲ್ಲದೇ ಸಿಮೆಂಟ್ ಪ್ಲೇಟ್ ಅಳವಡಿಸಿ ಕಂಪೌಂಡ ಗೋಡೆ ನಿರ್ಮಿಸಲಾಗಿದೆ.
ಕೆರೆಗುಂಡಿ ಪ್ರದೇಶದ ಅತಿಕ್ರಮಣ ತೆರವುಗೊಳಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಲೋಕೇಶ ಪಾಟಣಕರ್, ಉಪಾಧ್ಯಕ್ಷ ಅನಿಲ್ ಮರಾಠೆ, ಕಾರ್ಯದರ್ಶಿ ಸಂತೋಷ ಪಾಟಣಕರ್, ಸಹ ಕಾರ್ಯದರ್ಶಿ ಈಶ್ವರ ಪಾಟಣಕರ್, ಸದಸ್ಯರಾದ ಸುರೇಶ ಬೋರಕರ್, ಪೂಜಾ ನೇತ್ರೇಕರ, ಏಕನಾಥ ಮುರ್ಡೇಶ್ವರ, ಅನಿತಾ ಪಾವಸ್ಕರ್, ಭಾಗ್ಯಲಕ್ಷ್ಮೀ ಪಾಟಣಕರ್, ರಾಜು ಪಾಲೇಕರ್, ನಾಗರಾಜ ನೇತ್ರೇಕರ್, ವಿನಾಯಕ ಬೊರಕರ, ಚಾಂದರಾಜ್ ಪಾಟಣಕರ್, ಪಪಂ ಸದಸ್ಯೆ ಶ್ಯಾಮಲಿ ಪಾಟಣಕರ್ ಇದ್ದರು.