ಶಿರಸಿ: ನಗರದ ಯೋಗ ಮಂದಿರದಲ್ಲಿ ಯಕ್ಷ ಶಾಲ್ಮಲಾ ಸ್ವರ್ಣವಲ್ಲೀ, ಶಬರ ಸಂಸ್ಥೆ ಸೋಂದಾ, ಶ್ರೀಪ್ರಭಾ ಸ್ಟುಡಿಯೋ ಶಿರಸಿ ಇವರ ಸಹಯೋಗದಲ್ಲಿ ಜುಲೈ 14ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಯಕ್ಷಗಾನದಲ್ಲಿ ಅಭಿನಯ ಮತ್ತು ಮುದ್ರೆ ಬಳಕೆಗಳ ಕಾರ್ಯಾಗಾರ ನಡೆಯಲಿದೆ.
ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ ಇವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೆ ಜಿ ಮಂಜುನಾಥ, ರಾಮಕೃಷ್ಣ ಹೆಗಡೆ ಹಿಲ್ಲೂರು, ಭಾಗವಹಿಸಲಿದ್ದಾರೆ.
ಆಸಕ್ತರು ಭಾಗವಹಿಸಿ ಯಕ್ಷಗಾನದಲ್ಲಿ ಅಭಿನಯ, ಮುದ್ರೆಗಳು, ಪ್ರಯಾಣ ಕುಣಿತ, ಒಡ್ಡೋಲಗ ಮುಂತಾದ ಉಪಯುಕ್ತ ವಿಷಯಗಳ ಕುರಿತಾಗಿ ಸೋದಾಹರಣ ಪ್ರಾತ್ಯಕ್ಷಿಕೆ, ಚರ್ಚೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಾಗರಾಜ್ ಜೋಶಿ ಸೋಂದಾ 9448756273,7975760696 ಇವರನ್ನು ಸಂಪರ್ಕಿಸಬಹುದು.