ಭಟ್ಕಳ :ತಾಲೂಕಿನ ಮುಂಡಳ್ಳಿಯಲ್ಲಿ ಮಹಿಳೆಯೊಬ್ಬಳು ಬುಧವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹೊನ್ನಿಗದ್ದೆ ಹೆಬಲೆ ನಿವಾಸಿ ಸೀಮಾ ಹರೀಶ ಮೊಗೇರ (28) ಮೃತ ಮಹಿಳೆ. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಮಹಿಳೆ ವೈಯಕ್ತಿಕ ಕಾರಣಕ್ಕಾಗಿ ಜೀವನದಲ್ಲಿ ಬೇಸರಗೊಂಡು ಮುಂಡಳ್ಳಿಯಲ್ಲಿರುವ ತಾಯಿಯ ಮನೆಯ ಅಡುಗೆ ಕೋಣೆಯ ಮೇಲ್ಛಾಣಿಗೆ ಚೂಡಿದಾರ ವೇಲ್ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.