ಯಲ್ಲಾಪುರ: ತಾಲೂಕಿನ ಆನಗೋಡ ಯಕ್ಷಗಾನ ಹಾಗೂ ಕಲಾಮಿತ್ರ ಮಂಡಳಿ ಟ್ರಸ್ಟ್ ನ 20 ನೇ ವಾರ್ಷಿಕೋತ್ಸವ ಜು.13 ರ ರಾತ್ರಿ 8 ಕ್ಕೆ ಆನಗೋಡ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ.
ಯಕ್ಷಗಾನ ತರಬೇತಿ ವರ್ಗದ ವಿದ್ಯಾರ್ಥಿಗಳಿಂದ ಅನಂತ ಹೆಗಡೆ ದಂತಳಿಗೆ ವಿರಚಿತ ಶ್ರೀರಾಮ ದರ್ಶನ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ತರಬೇತಿ ವರ್ಗದ ಶಿಕ್ಷಕರಾದ ಅನಂತ ಹೆಗಡೆ ಹಾಗೂ ಸದಾಶಿವ ಮಲವಳ್ಳಿ ಅವರ ನಿರ್ದೇಶನದಲ್ಲಿ ಈ ಪ್ರದರ್ಶನ ನಡೆಯಲಿದ್ದು, ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ, ಚಂಡೆವಾದಕರಾಗಿ ಪ್ರಮೋದ ಹೆಗಡೆ ಕಬ್ಬಿನಗದ್ದೆ ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಸುಬ್ರಾಯ ಹೆಗಡೆ ಮಳಗಿಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.