ಯಲ್ಲಾಪುರದ ನಾಯಕನಕೆರೆ ಶಾರದಾಂಬಾ ಸಭಾಭವನದಲ್ಲಿ ತಾಲೂಕು ಹವ್ಯಕ ನೌಕರರ ಕ್ಷೇಮಭಿವೃದ್ಧಿ ಸಂಘ ಏರ್ಪಡಿಸಿದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ನಿಧಿ ವಿತರಣೆ ಸಮಾರಂಭ ನಡೆಯಿತು.
ಟಿ.ಎಂ.ಎಸ್ ಅಧ್ಯಕ್ಷ ಎನ್ ಕೆ ಭಟ್ಟ ಅಗ್ಗಾಶಿಕುಂಬ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಯಲ್ಲಾಪುರದಲ್ಲಿ ಎಂಟು ವರ್ಷಗಳ ಕಾಲ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ, ಪದೋನ್ನತಿ ಹೊಂದಿದ ಕುಮಟಾ ಡಯಟ್ ಉಪನಿರ್ದೇಶಕ ಎನ್ ಆರ್ ಹೆಗಡೆ ಇವರನ್ನು ಗೌರವಿಸಲಾಯಿತು.
ಹಿಂದೂಸ್ತಾನಿ ಸಂಗೀತದಲ್ಲಿ, ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜ್ಯ ಕಲಾಶ್ರೀ ಪ್ರಶಸ್ತಿ ಪಡೆದ ಸಮೃದ್ಧಿ ಭಾಗ್ವತ, ಸಿ ಬಿ ಎಸ್ ಸಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶ್ರೀನಿಧಿ ಭಟ್ಟ ಇವರನ್ನು ಪುರಸ್ಕರಿಸಲಾಯಿತು. ಯೋಗ ಪಟುಗಳಾದ ರಾಧಾ ಭಟ್ಟ ಮತ್ತು ಸುಬ್ರಾಯ ಭಟ್ಟ ಇವರನ್ನು, ತಾಲೂಕಿನಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರನ್ನು ಗೌರವಿಸಲಾಯಿತು.
ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗನ್ನು ಪುರಸ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ನಡೆದ ಅನೇಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಅಧ್ಯಕ್ಷ ಡಿ ಜಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಶಾರದಾಂಬಾ ಪಾಠಶಾಲೆಯ ಅಧ್ಯಕ್ಷ ಉಮೇಶ ಭಾಗ್ವತ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ಭಟ್ಟ, ಅಡಕೆ ವರ್ತಕ ನರಸಿಂಹಮೂರ್ತಿ ಕೋಣೆಮನೆ ಇದ್ದರು. ಜಿ ಎಸ್ ಗಾಂವ್ಕರ, ಲಕ್ಷ್ಮಿ ಭಟ್ಟ, ನಾಗರಾಜ ಹೆಗಡೆ, ವರದರಾಜ ಭಟ್ಟ, ಸುದರ್ಶನ ಭಟ್ಟ ನಿರ್ವಹಿಸಿದರು.