ಯಲ್ಲಾಪುರದ ಸುಜ್ಞಾನ ಸೇವಾ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಸಹಯೋಗ, ಪ್ರಾಯೋಜಕತ್ವದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ-2025 ರ ಫಲಿತಾಂಶವನ್ನು ಶುಕ್ರವಾರ ಪ್ರಕಟಗೊಂಡಿದೆ.
ಯಲ್ಲಾಪುರ ತಾಲೂಕಿನ ಪುರಾಣ ಪ್ರಸಿದ್ಧ ಅಣಲಗಾರ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ, ಶ್ರೀಕೃಷ್ಣ ಜನ್ಮಾಷ್ಟಮಿಯ ಪುಣ್ಯ ಪರ್ವಕಾಲದಲ್ಲಿ ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಫಲಿತಾಂಶವನ್ನು ಬಿಡುಗಡೆಗೊಳಿಸಲಾಯಿತು.
ವಿಕಾಸ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಆರ್.ಭಟ್ ಬಿದ್ರೇಪಾಲ್, ಸುಜ್ಞಾನ ಸೇವಾ ಸಂಸ್ಥೆಯ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ, ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಭಟ್ ಯಲ್ಲಾಪುರ, ಗೌತಮ್ ಜುವೆಲರ್ಸ್ ಮಾಲೀಕ ಪ್ರಕಾಶ ಶೇಟ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಂಚಾಲಕ ಎಂ.ರಾಜಶೇಖರ್ ಮುಂತಾದವರು ಇದ್ದರು.
ಸ್ಪರ್ಧೆಯಲ್ಲಿ ವೈಷ್ಣವಿ ಹೆಗಡೆ ಶಿರಸಿ ಪ್ರಥಮ, ಶಿವಾಂಶ್ ಭೋವಿ ಕಾರವಾರ ದ್ವಿತೀಯ ಹಾಗೂ ಸದ್ಗುಣಾ ಸಿದ್ದು ಗುಡಿ ಯಲ್ಲಾಪುರ ತೃತೀಯ ಸ್ಥಾನ ಪಡೆದಿದ್ದಾರೆ. ವಿವಾನ್ ಅಣ್ವೇಕರ್ ಕಾರವಾರ, ವೇದಾಂತ ನಾಯ್ಕ ಯಲ್ಲಾಪುರ, ಶರಣ್ಯಾ ವಿಟ್ಠಲಕರ್ ಶಿರಸಿ, ಸನ್ನತಿ ಭಟ್ ಹುಲಗಾನ, ಚಿನ್ಮಯಿ ನಾಯ್ಕ ಕುಮಟಾ, ಮನ್ವಿತ ಹೆಗಡೆ ಮಂಚಿಕೇರಿ, ಪ್ರಣಮ್ ಬಾರ್ಕೂರ್ ಶಿರಸಿ, ನಿಯತಿ ಭಟ್ ಕಳಚೆ, ಪಾರ್ಥ ಜಡ್ಡಿಪಾಲ್, ಸುಧನ್ವ ವಿ ಅಂಕೋಲಾ, ಅಮೀತ್ ಬಾಳಗಿಮನೆ, ಧನ್ವಿ ಪಟಗಾರ್ ಮಂಜುನಾಥನಗರ, ಧೃತಿ ನಾಯ್ಕ ಕಾರವಾರ, ಶ್ರೀವತ್ಸ ಭಟ್ ಮುಂಡಗೋಡಿಮನೆ, ಅದ್ವಿತ್ ಮಳಿಕ್ ಬರಗದ್ದೆ, ರಾಘವಿ ಶೆಟ್ಟಿ ಗುಳ್ಳಾಪುರ, ಅನನ್ಯಾ ಹಿರೇಮಠ್ ಕಿರವತ್ತಿ, ಧೃತಿ ಗುನಗಾ ಕಾಳಮ್ಮನಗರ, ತತ್ವಮ್ ಗುರವ್ ಯಲ್ಲಾಪುರ, ತೌಶಿಣಿ ಗಾಂವ್ಕಾರ್ ಶಿರಸಿ, ಹನೀಷಾ ಗೌಡ ಗುಳ್ಳಾಪುರ, ಆರಾಧ್ಯಾ ರೇವಣ್ಕರ್ ಕಾಳಮ್ಮನಗರ, ವೃದ್ಧಿ ಗಾಂವ್ಕಾರ್ ಆನಗೋಡ ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
ಸದ್ಯದಲ್ಲಿಯೇ ನಡೆಯುವ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ತಿಳಿಸಿದ್ದಾರೆ.