ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮದ ಪ್ರಕಾರ ಎಲ್ಲಾ ಜಿಲ್ಲೆಗಳಲ್ಲಿಯೂ ಗೋಶಾಲೆಗಳನ್ನು ತೆರೆಯಲಾಗಿದ್ದು, ಹಳಿಯಾಳದ ದುಸಗಿ ಗ್ರಾಮದಲ್ಲಿ ಸರ್ಕಾರದಿಂದ ಗೋಶಾಲೆ ನಿರ್ಮಿಸಲಾಗಿದೆ.
ಇದರ ಜೊತೆ ಕಾರವಾರದ ಕಣಸಗಿರಿ ಹಾಗೂ ಶಿರಸಿಯ ಅಜ್ಜಿಬಾಳದಲ್ಲಿ ಗೋಶಾಲೆಯ ಕಟ್ಟಡ ನಿರ್ಮಾಣವಾಗುತ್ತಿದೆ. ಪ್ರಾಣಿದಯಾ ಸಂಘ ಅಥವಾ ಯಾವುದೇ ಸಾರ್ವಜನಿಕರ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡು ಗೋಶಾಲೆಯ ನಿರ್ವಹಣೆ ಮಾಡಲು ಮುಂದಾಗಿದ್ದು, ಗೋವುಗಳ ರಕ್ಷಣೆಗಾಗಿ ದುಡಿಯಲು ಆಸಕ್ತರಿರುವವರು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರನ್ನು ಭೇಟಿ ಮಾಡಿ.
Discussion about this post