ಯಾರಿಗೆ ಜ್ವರ ಬಂದಿದೆ? ಯಾರ ಮನೆಯಲ್ಲಿ ಸೊಳ್ಳೆಗಳಿವೆ? ಹೀಗೆ ಹುಡುಕುತ್ತ ಮನೆ ಮನೆ ತಿರುಗಾಟ ನಡೆಸಿದರು ಕಾರವಾರ ಶಾಸಕ ಸತೀಶ್ ಸೈಲ್!
ಕೋಣೆನಾಲದ ನೀರು ಸಮುದ್ರ ಸೇರುವ ಪ್ರದೇಶವಾದ ಕೋಡಿಬೀರದ ಬಳಿ ಮೊದಲೇ ಸೊಳ್ಳೆಗಳ ಕಾಟ ಜಾಸ್ತಿ. ಅಲ್ಲಿಯೇ ಜಿಲ್ಲಾಡಳಿತ `ಈಡಿಸ್ ಉತ್ಪತ್ತಿ ತಾಣ ನಾಶ ಚಟುವಟಿಕೆಗೆ ಚಾಲನೆ’ ಕಾರ್ಯಕ್ರಮ ಆಯೋಜಿಸಿದ್ದು, ಇದನ್ನು ಉದ್ಘಾಟಿಸಿದ ಶಾಸಕ ಸತೀಶ್ ಸೈಲ್ `ಡೆಂಗಿ ಜ್ವರ ನಿಯಂತ್ರಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಪ್ರತಿಯೊಬ್ಬರೂ ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶ ಪಡಿಸಿ’ ಎಂದು ಭಾಷಣ ಮಾಡಿದರು. ಅದಾದ ನಂತರ ಅಲ್ಲಿನ ರಸ್ತೆ ಅಂಚಿನಲ್ಲಿ ನಡೆದು ಹೋದ ಅವರು ಸಮೀಪದಲ್ಲಿದ್ದ ಮನೆ ಮನೆಗೆ ತೆರಳಿ ಸ್ವಚ್ಛತೆಯ ಕುರಿತು ಪರಿಶೀಲನೆ ನಡೆಸಿದರು. ಒಬ್ಬರ ಮನೆಯ ಅಡುಗೆ ಮನೆಗೆ ತೆರಳಿದ ಅವರು ಅಲ್ಲಿನ ಮಾಲಿನ್ಯದ ಬಗ್ಗೆ ಅರಿವು ಮೂಡಿಸಿದರು. ಮನೆಯ ಸುತ್ತಮುತ್ತ, ಮನೆಯ ಒಳಗೆ, ವಾಷಿಂಗ್ ಮಿಷಿನ್, ಫ್ರಿಡ್ಜ್, ಡ್ರಂ, ಪರೀಕ್ಷಿಸಿದರು. ನಂತರ ಡೆಂಗು ಜ್ವರ ಹರಡುವ ಬಗ್ಗೆ ಹಾಗೂ ಹೇಗೆ ನಿಯಂತ್ರಣದ ಬಗ್ಗೆ ಅಲ್ಲಿನವರಿಗೆ ಮಾಹಿತಿ ನೀಡಿದರು.
ಅವರ ಜೊತೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ ರಮೇಶ್ ರಾವ್, ತಾಲೂಕು ಆರೊಗ್ಯ ಅಧಿಕಾರಿ ಸೂರಜ್ ನಾಯಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಟರಾಜ್ ಕೆ, ಪ್ರಮುಖರಾದ ಶಂಬು ಶೆಟ್ಟಿ ಇತರರು ಇದ್ದರು.




Discussion about this post