`ಉತ್ತರ ಕನ್ನಡ ಜಿಲ್ಲೆಯಲ್ಲಿ 71 ಸ್ಕಾನಿಂಗ್ ಸೆಂಟರ್’ಗಳಿದ್ದು, ಬ್ರೂಣ ಲಿಂಗ ಪತ್ತೆ ವಿಷಯವಾಗಿ ಜುಲೈ’ನಿಂದ ಸೆಪ್ಟಂಬರ್ ತಿಂಗಳಿನಲ್ಲಿ ಅವುಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ತಪಾಸಣೆ ನಡೆಸಲಾಗುತ್ತದೆ’ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅನ್ನಪೂರ್ಣ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. `ಅಧಿಕೃತ’ ಮಾಹಿತಿ ನೀಡಿ ದಾಳಿ ನಡೆಸುವುದಾದರೆ ಅದು `ಅನಿರೀಕ್ಷಿತ’ ಹೇಗಾಗುತ್ತದೆ? ಎಂಬುದು ಎಲ್ಲರ ಪ್ರಶ್ನೆ.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯವರು `ಎಲ್ಲಿ ಯಾವಾಗ ದಾಳಿ ಮಾಡುತ್ತೇವೆ ಎಂದು ಯಾರಿಗೂ ಗೊತ್ತಾಗಲ್ಲ. ಆದರೆ, ಖಂಡಿತವಾಗಿ ದಾಳಿ ನಡೆಸಿ, ತಪಾಸಣೆ ನಡೆಸುತ್ತೇವೆ’ ಎಂದಿದ್ದಾರೆ. `ಎಲ್ಲಾ ಸ್ಕಾನಿಂಗ್ ಸೆಂಟರ್’ಗಳಲ್ಲಿ ಸರಕಾರದ ಮಾರ್ಗಸೂಚಿಯಂತೆ ಅಗತ್ಯ ಅನುಮತಿಯನ್ನು ಪಡೆದಿರುವ ಬಗ್ಗೆ ತಪಾಸಣೆ ನಡೆಸಲಾಗುತ್ತದೆ. ಗರ್ಭ ಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ತಡೆಗೆ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಮತ್ತು ಸ್ಕಾನಿಂಗ್ ಸೆಂಟರ್’ಗೆ ಭೇಟಿ ನೀಡುವ ಎಲ್ಲಾ ರೋಗಿಗಳ ಸಮಗ್ರ ಮಾಹಿತಿಯನ್ನು ನಿಗಧಿತ ರೀತಿಯಲ್ಲಿ ದಾಖಲಿಸಿ ಸಂರಕ್ಷಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಯಾವುದೇ ಮಾರ್ಗಸೂಚಿಗಳ ಉಲ್ಲಂಘನೆ ಕಂಡು ಬಂದಲ್ಲಿ ಅಂಥಹ ವೈದ್ಯರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ’ ಎಂದವರು ಎಚ್ಚರಿಸಿದ್ದಾರೆ.
Discussion about this post