ಗೋಮಾಳ, ಹುಲ್ಲುಗಾವಲು, ಬನ್ನಿ ಖರಾಬು, ಸರ್ಕಾರಿ ಫಡಾ, ಸರ್ಕಾರಿ ಬೀಳು, ದನಗಳಿಗೆ ಮುಫತ್ತು, ಸರ್ಕಾರಿ ದಾರಿ, ಗುಂಡು ತೋಪು, ಸರ್ಕಾರಿ ಕೇರೆ ಹಾಗೂ ಸ್ಮಶಾನವನ್ನು ಒಳಗೊಂಡು ಒತ್ತುವರಿಯಾಗಿರುವ ಕಂದಾಯ ಆಸ್ತಿಗಳ ರಕ್ಷಣೆಗೆ ಉತ್ತರ ಕನ್ನಡ ಜಿಲ್ಲಾಡಳಿತ ವಿಭಿನ್ನ ಪ್ರಯತ್ನ ನಡೆಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಒತ್ತುವರಿಯಾದ ಭೂಮಿಯನ್ನು ವಶಕ್ಕೆ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರಿ ಆಸ್ತಿ ಒತ್ತುವರಿಯನ್ನು ವೈಜ್ಞಾನಿಕವಾಗಿ ಗುರುತಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರಯತ್ನ ನಡೆಸಿದೆ. ಕಂದಾಯ ಇಲಾಖೆಯ ಭೂಮಿ ಖಾಸಗಿಯವರ ಪಾಲಾಗುವುದನ್ನು ತಡೆಯಲು `ಲ್ಯಾಂಡ್ ಬೀಟ್’ ಆಫ್ ಮೊರೆ ಹೋಗಿದೆ. ಜೊತೆಗೆ ಸರ್ಕಾರಿ ವಶದಲ್ಲಿರುವ ಜಮೀನುಗಳಿಗೆ `ಜಿಯೋ ಫೆನ್ಸಿಂಗ್’ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಯಲ್ಲಿ 1,04,192 ಸ್ಥಳಗಳಲ್ಲಿ ಕಂದಾಯ ಆಸ್ತಿಯಿದೆ. ಆ ಪಯಕಿ 79,628 ಸ್ಥಳಗಳಿಗೆ ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ಇದುವರೆಗೆ 62,163 ಸರಕಾರಿ ಆಸ್ತಿಗಳಿಗೆ ಸಂಪೂರ್ಣ ಜಿಯೋ ಫೆನ್ಸಿಂಗ್ ಮಾಡಲಾಗಿದೆ.
Discussion about this post