ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರನ್ನು ಸ್ವಾಗತಿಸಿ ಇಲ್ಲಿನ ತಾಣಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸುವ ಪ್ರವಾಸಿ ಮಾರ್ಗದರ್ಶಿಗಳನ್ನು ಆಯ್ಕೆ ಮಾಡಲು ಜಿಲ್ಲಾಡಳಿತ ತಯಾರಿ ನಡೆಸಿದೆ.
ಪ್ರವಾಸೋದ್ಯಮ ಇಲಾಖೆಯ ಮೂಲಕ ಪ್ರವಾಸಿ ಮಾರ್ಗದರ್ಶಿಗಳ ನೇಮಕಾತಿ ನಡೆಯಲಿದ್ದು ಐತಿಹಾಸಿಕ, ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ಹಿನ್ನಲೆಯ ಬಗ್ಗೆ ಜ್ಞಾನ ಪಡೆದು ಅದನ್ನು ಪ್ರವಾಸಿಗರಿಗೆ ತಿಳಿಸುವವರಿಗಾಗಿ ಹುಡುಕಾಟ ನಡೆದಿದೆ. ಆಸಕ್ತರು ಜುಲೈ 8ರ ಒಳಗೆ ಅರ್ಜಿ ಸಲ್ಲಿಸಬಹುದು. 45 ವರ್ಷ ಒಳಗಿನ ಪಿಯುಸಿ ಪಾಸಾದವರು ಪ್ರವಾಸಿ ಗೈಡ್ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿ ಸಲ್ಲಿಸಬೇಕಾದ ವಿಳಾಸ:
ಉಪ ನಿರ್ದೇಶಕರು
ಪ್ರವಾಸೋದ್ಯಮ ಇಲಾಖೆ
ಆರ್.ಟಿ.ಓ. ಕಛೇರಿ ಹತ್ತಿರ
ಕಾರವಾರ -581301
ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ನೀಡಿ, ಪ್ರವಾಸಿ ಮಾರ್ಗದರ್ಶಿ ಪರವಾನಿಗೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಪ್ರವಾಸೋದ್ಯಮ ಇಲಾಖೆ: 08382-221172 ಸಂಪರ್ಕಿಸಿ.
Discussion about this post