ಕಾರವಾರ: ಭಾರತೀಯ ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಚೆಂಡಿಯಾದ ಪ್ರಸಾದ ಪೆಡ್ನೇಕರ್ ಎಂಬಾತ ನಂದನಗದ್ದಾದ ರಾಘವೇಂದ್ರ ನಾಯ್ಕ ಎಂಬಾತನಿoದ 2 ಲಕ್ಷ ರೂ ವಸೂಲಿ ಮಾಡಿ, ವಂಚಿಸಿದ್ದಾನೆ.
ರಾಘವೇoದ್ರ ನಾಯ್ಕ ನೌಕಾನೆಲೆಯಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವುದನ್ನು ಅರಿತ ಪ್ರಸಾದ ಪೆಡ್ನೇಕರ್, `ತನಗೆ ಅಲ್ಲಿ ಕಮಾಂಡರ್ ಪರಿಚಯ ಇದ್ದಾರೆ. ನಿನಗೆ ಕೆಲಸ ಕೊಡಿಸಲು 5 ಲಕ್ಷ ರೂ ಕೇಳಿದ್ದಾರೆ’ ಎಂದು ಹೇಳಿದ್ದಾನೆ. ಇದನ್ನು ನಂಬಿದ ರಾಘವೇಂದ್ರ ನಾಯ್ಕ 2 ಲಕ್ಷ ರೂ ಮುಂಗಡ ಹಣ ನೀಡಿ, ಉಳಿದ ಹಣ ಉದ್ಯೋಗ ದೊರೆತ ನಂತರ ನೀಡುವುದಾಗಿ ತಿಳಿಸಿದ್ದಾನೆ. ಪ್ರಸಾದನ ಸೂಚನೆ ಮೇರೆಗೆ 2020ರ ಫೆಬ್ರವರಿಯಲ್ಲಿ ರಾಘವೇಂದ್ರ ನಾಯ್ಕ ಸಿದ್ದೇಶ್ ಪೆಡ್ನೇಕರ್ ಎಂಬಾತರ ಖಾತೆಗೆ 2 ಲಕ್ಷ ರೂ ವರ್ಗಾಯಿಸಿದ ದಾಖಲೆಗಳಿದೆ. ಆದರೆ, ಈವರೆಗೂ ಪ್ರಸಾದ ಪೆಡ್ನೇಕರ್ ಉದ್ಯೋಗ ಕೊಡಿಸಿಲ್ಲ.
ಇದೀಗ ಮೋಸ ಹೋದದನ್ನು ಅರಿತ ರಾಘವೇಂದ್ರ ನಾಯ್ಕ `ತನಗೆ ಕಾಸು ಮರಳಿಸಿ, ಇಲ್ಲವಾದಲ್ಲಿ ಉದ್ಯೋಗವನ್ನಾದರೂ ಕೊಡಿಸಿ’ ಎಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದಾನೆ.
Discussion about this post