ಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ
ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ
ಬೆಂಗಳೂರು: ಎಸ್ ಐಆರ್ ಪ್ರಕ್ರಿಯೆಗೆ ಸಂಬಂಧ ಪಟ್ಟಂತೆ ಚುನಾವಣಾ ಆಯೋಗದ ದೂರು ಇಲ್ಲದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟವಾಗಿ ಹೇಳಿದೆ. ಆಯೋಗ ಎಲ್ಲಿಯೂ ದೂರು ಕೊಟ್ಟಿಲ್ಲ ಎಂದು ಚುನಾವಣಾ ಆಯೋಗವೇ ತಿಳಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಎಫ್ ಐ ಆರ್ ಹಾಕುತ್ತಿರುವುದು ಕಾನೂನು ಬಾಹಿರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಮೇಲೆ ಅನಗತ್ಯ ಎಫ್ ಐ ಆರ್ ಹಾಕುತ್ತಿರುವುದರ ಕುರಿತು ಎನ್ ಡಿಎ ನಾಯಕರು ರಾಜ್ಯ ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿ ಮಾಡಿದ ನಂತರ ಕೇಂದ್ರ ಚುನಾವಣಾ ಆಯೋಗದ ಎದುರು ಮಾಧ್ಮಗಳೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಆಯೋಗದ ಎದುರು ಬಂದು ಅವಾಂತರ ಮಾಡಿ, ಆಯೋಗದ ಮೇಲೆ ಒತ್ತಡ ಹಾಕಿ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ. ಚುನಾವಣಾ ಆಯೋಗದ ದೂರು ಇಲ್ಲದೇ ಯಾವುದೆ ಎಫ್ ಐಆರ್ ಮಾಡಲು ಅವಾಕಶ ಇಲ್ಲ. ಚುನಾವಣಾ ಆಯೊಗವೇ ದೂರು ನೀಡಬೇಕು. ಆದರೆ, ಖಾಸಗಿ ವ್ಯಕ್ತಿಗಳ ದೂರುಗಳ ಆಧಾರದಲ್ಲಿ ಪ್ರತಿದಿನ ಎಫ್ ಐಆರ್ ದಾಖಲಿಸುತ್ತಿದ್ದಾರೆ. ಎಫ್ ಐ ಆರ್ ದಾಖಲು ಮಾಡಲು ಖಾಸಗಿ ವ್ಯಕ್ತಿಗಳಿಗೆ ಅವಕಾಶ ಇಲ್ಲ ಎಂದು ಆಯೋಗ ಸ್ಪಷ್ಟವಾಗಿ ಹೇಳಿದೆ. ನಾವು ಎಲ್ಲಿಯೂ ಎಅರ್ ಒ ಬಿಎಲ್ ಒ ಒಂದು ದೂರು ಕೊಟ್ಟಿಲ್ಲ. ಬೇರೆಯವರು ಕೊಟ್ಟಿರುವ ದೂರುಗಳ ಬಗ್ಗೆ ನಮಗೆ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಹಾಕಿರುವ ಎಫ್ ಐ ಆರ್ ಕಾನೂನು ಬಾಹಿರವಾಗಿದೆ ಎಂದು ತಿಳಿಸಿದರು.
ಫಾರ್ಮ್ ನಂಬರ್ 7, ಫಾರ್ಮ್ ನಂಬರ್ 6 ಇರಲಿ ಎಸ್ ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪೊಲಿಸರು ಯಾವುದೇ ದೂರು ದಾಖಲಿಸಬಾರದು ಎಂದು ಸೂಚನೆ ಕೊಡಲು ಚುನಾವಣಾ ಆಯೋಗಕ್ಕೆ ಕೇಳಿದ್ದೇವೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮಾಹಿತಿ ಕೇಳಿರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ವಿತಂಡವಾದ
ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಕಳೆದ ವರ್ಷ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದೆ ಅಂತ ಆರೋಪ ಮಾಡಿದ್ದರು. ಈಗ ಅಕ್ರಮ ಮತದಾರರ ಹೆಸರು ಡಿಲೀಟ್ ಮಾಡಲಾಗುತ್ತಿದೆ. ಡಿಲೀಟ್ ಮಾಡಬೇಡಿ ಎನ್ನುತ್ತಾರೆ. ಇವರದು ವಿತಂಡವಾದ. ಅವರಿಗೆ ನಕಲಿ ಓಟ್ ಡಿಲಿಟ್ ಆಗುತ್ತವೆ ಎನ್ನುವ ಆತಂಕ. ಅವರು ಎಲ್ಲದರಲ್ಕೂ ಧರ್ಮ, ಜಾತಿ ಹೆಸರಲ್ಲಿ ರಾಜಕಾರಣ ಮಾಡುತ್ತಾರೆ. ಚುನಾವಣಾ ಆಯೋಗವೇ 43 ಲಕ್ಷ ಜನರಿಗೆ ನೊಟಿಸ್ ಕೊಟ್ಡಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಭಯ ಇದೆ. ಮತದಾರರ ಪಟ್ಟಿ ಶುದ್ದಿಕರಣ ಆದರೆ ಅವರ 2028 ರ ಕನಸು ಭಗ್ನ ಆಗುತ್ತದೆ ಎನ್ನುವ ಆತಂಕದಿಂದ ಆಯೋಗದ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಿದರು.
ಗುಂಪಾಗಿ ಫಾರ್ಮ್ ನಂಬರ್ 7 ಅರ್ಜಿ ಕೊಡಿತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಪಿಕ್ ನಂಬರ್ ಎಲ್ಲವು ವೆಬ್ ಸೈಟ್ ನಲ್ಲಿ ಸಿಗುತ್ತವೆ. ಚುನಾವಣಾ ಆಯೋಗವೇ ಹೇಳಿದೆ. ಬರುವ ದೂರುಗಳನ್ನು ಸ್ವೀಕರಿ ಪರಿಶಿಲನೆ ನಡೆಸಿ ನಂತರ ಕ್ರಮ ಕೈಗೊಳುತ್ತದೆ. ಕೋರ್ಟ್ ಕೂಡ ಹೇಳಿದೆ ಫಾರ್ಮ್ ನಂಬರ್ 7 ದೂರು ಕೊಟ್ಟ ತಕ್ಷಣ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯ ಇಲ್ಲ ಅಂತ ಹೇಳಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಪ್ರತಿಪಕ್ಷದ ನಾಯಕರಾದ ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳು ಹಾಜರಿದ್ದರು.





