ದಾಂಡೇಲಿ: `ಕೆಲಸ ಮಾಡಲು ಆಗದ ಅಧಿಕಾರಿಗಳು ಮನೆಗೆ ಹೋಗಿ’ ಎಂದು ಹಳಿಯಾಳ ಕ್ಷೇತ್ರ ಶಾಸಕ ಆರ್ ವಿ ದೇಶಪಾಂಡೆ ಸೊಮವಾರ ನಡೆದ ಜನಸ್ಪಂದನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆದರು.
ಉತಾರ ನೀಡಲು ಸತಾಯಿಸುತ್ತಿರುವ ನಗರ ಸಭೆಯ ಸಿಬ್ಬಂದಿ ಬಗ್ಗೆ ಜನ ತಕರಾರು ಸಲ್ಲಿಸಿದ್ದು, ಈ ವೇಳೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಸಿಬ್ಬಂದಿ ಹತ್ತಿರ ಕರೆದು ಅವರ ವರ್ತನೆಯ ತರಾಟೆಗೆ ತೆಗೆದುಕೊಂಡರು ನಂತರ `ಎಲ್ಲಾ ಇಲಾಖೆ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು’ ಎಂದು ಅವರು ಕಿವಿಮಾತು ಹೇಳಿದರು.
Discussion about this post