ಹೊನ್ನಾವರ: ಸಿದ್ದಾಪುರ – ಹೊನ್ನಾವರ ರಸ್ತೆಯಲ್ಲಿ ಸಂಚರಿಸುತ್ತಿದ್ದ ಚಂದಾವರದ ಅಹ್ಮದ್ ಖಾನ್ ಹಾಗೂ ರೆಹಮಾನ್’ಗೆ ಕಾರು ಡಿಕ್ಕಿಯಾಗಿದೆ.
ಜುಲೈ 1ರಂದು ವಡಗೇರಿ ಬಳಿ ಈ ಅಪಘಾತ ನಡೆದಿದ್ದು, ಅಪರಿಚಿತ ಕಾರು ಚಾಲಕ ಹೆದರಿ ಅಲ್ಲಿಂದ ಪರಾರಿಯಾಗಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಸವಾರರಿಬ್ಬರೂ ನೆಲಕ್ಕೆ ಅಪ್ಪಳಿಸಿದ್ದು, ಪ್ರಜ್ಞೆತಪ್ಪಿ ಬಿದ್ದಿದ್ದರು. ಇದನ್ನು ನೋಡಿದ ಸ್ಥಳೀಯರು ಗಾಯಗೊಂಡವರಿಗೆ ನೀರು ಕೊಟ್ಟು ಉಪಚರಿಸಿದರು. ನಂತರ ಪ್ರಾಥಮಿಕ ಆರೈಕೆ ಮಾಡಿ, ರಿಕ್ಷಾ ಮೂಲಕ ಕುಮಟಾ ಆಸ್ಪತ್ರೆಗೆ ಕರೆತಂದಿದ್ದಾರೆ. ಬೈಕ್ ಓಡಿಸುತ್ತಿದ್ದ ಅಹ್ಮದ್ ಖಾನ್’ಗೆ ಹೆಚ್ಚಿನ ಗಾಯವಾಗಿಲ್ಲ. ಜೊತೆಗಿದ್ದ ರೆಹಮಾನ್’ಗೆ ತಲೆ, ಮುಖ, ಬುಜಕ್ಕೆ ಪೆಟ್ಟಾಗಿದೆ.
Discussion about this post