ತನ್ನ ಮೂರನೇ ವಯಸ್ಸಿನಲ್ಲಿಯೇ ಯಕ್ಷನೃತ್ಯದ ಮೂಲಕ ಪ್ರಸಿದ್ಧಿ ಪಡೆದಿದ್ದ ಶಿರಸಿಯ ತುಳಸಿ ಹೆಗಡೆ ಅವರು ಇದೀಗ ವಿಶ್ವ ದಾಖಲೆಯ ಪಟ್ಟಿಯಲ್ಲಿಯೂ ತಮ್ಮ ಹೆಸರು ದಾಖಲಿಸಿದ್ದಾರೆ.
ಪ್ರಸ್ತುತ 10ನೇ ತರಗತಿ ಓದುತ್ತಿರುವ ತುಳಸಿ ಹೆಗಡೆ ಅವರು ಕಳೆದ ಐದುವರೆ ವರ್ಷಗಳಿಂದ `ವಿಶ್ವಶಾಂತಿ’ಗಾಗಿ ಯಕ್ಷನೃತ್ಯ ಪ್ರದರ್ಶನ ನೀಡುತ್ತಿದ್ದಾರೆ. ಯಕ್ಷಗಾನ ಕಲಾ ಪ್ರಕಾರದ ಮೂಲಕ ವಿಶ್ವಶಾಂತಿಗೆ ಈವರೆಗೆ 9 ಕಲಾ ಕುಸುಮದ ಮೂಲಕ ಕೊಡುಗೆ ನೀಡಿದ್ದಾರೆ. ಈವರೆಗೆ 850 ಯಕ್ಷ ಪ್ರದರ್ಶನಗಳನ್ನು ಅವರು ನೀಡಿದ್ದಾರೆ.

ಪೌರಾಣಿಕ ಆಖ್ಯಾನಗಳ 9 ರೂಪಕಗಳನ್ನು ಪ್ರಸ್ತುತಗೊಳಿಸುವ ಅವರು ದೇಶ-ವಿದೇಶಗಲ್ಲಿ ಸಹ ಪ್ರದರ್ಶನ ನೀಡಿದ್ದಾರೆ. ಈಗಾಗಲೇ `ಇಂಡಿಯಾ ಬುಕ್ ಆಪ್ ರೆಕಾರ್ಡ’ನಲ್ಲಿ ಅವರ ಹೆಸರಿದ್ದು, ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಭೇಟಿ ಮಾಡಿದ್ದರು. ಈ ಎಲ್ಲಾ ಸಾಧನೆ ಗುರುತಿಸಿ ಲಂಡನ್ ಮೂಲದ ಪ್ರತಿಷ್ಠಿತ `ವಲ್ಡ್ 9 ರೆಕಾರ್ಡ್ ಸಂಸ್ಥೆ’ ತುಳಸಿ ಹೆಗಡೆ ಅವರ ಹೆಸರನ್ನು ವಿಶ್ವ ದಾಖಲೆಯ ಪಟ್ಟಿಯಲ್ಲಿ ದಾಖಲಿಸಿದೆ.
Discussion about this post