ಕಾರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ 1 ವರ್ಷಗಳ ಅವಧಿಗೆ ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳುಲು ಅರ್ಜಿ ಆಹ್ವಾನಿಸಲಾಗಿದೆ.
ಸಮಾಜ ಸೇವೆಯಲ್ಲಿ ಆಸಕ್ತಿಯುಳ್ಳ ಕಾರವಾರದ ಯುವಕ – ಯುವತಿಯರು, ನಿವೃತ್ತ ಶಿಕ್ಷಕರು, ನಿವೃತ್ತ ಸರಕಾರಿ ನೌಕರರು, ಹಿರಿಯ ನಾಗರಿಕರು, ಕಾನೂನು ವಿದ್ಯಾರ್ಥಿಗಳು, ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು, ವೈದ್ಯರು, ಸಂಘ ಸಂಸ್ಥೆಯ ಪದಾಧಿಕಾರಿಗಳು ಸೇರಿ ಕನಿಷ್ಠ 10 ನೇ ತರಗತಿ ಪಾಸಾಗಿರುವ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರು ಕಾನೂನು ಸೇವೆಗಳ ಪ್ರಾಧಿಕಾರದ ಕಛೇರಿಗೆ ಸಂಬoಧಪಟ್ಟ ಚಟುವಟಿಕೆ ನಡೆಸಿದಲ್ಲಿ 500ರೂ ಗೌರವಧನ ಹಾಗೂ ಅರ್ಧ ದಿನ ಕೆಲಸ ಮಾಡಿದಲ್ಲಿ 250ರೂ ಗೌರವಧನ ಸಿಗಲಿದೆ. ಇನ್ನಿತರ ಪ್ರಾಧಿಕಾರದ ಉಪಯುಕ್ತ ಸಾರ್ವಜನಿಕ ಸಮಸ್ಯೆಗಳ ಬಗೆಹರಿಸುವಲ್ಲಿ ಅವರಿಗೆ ತಗುಲುವ ಪ್ರಯಾಣದ ವೆಚ್ಚ ನೀಡಲಾಗುತ್ತದೆ. ಇದಕ್ಕೆ ಆಸಕ್ತಿ ಇರುವವರು ಜುಲೈ 17ರ ಒಳಗೆ ತಮ್ಮ ದಾಖಲೆಗಳ ಜೊತೆ ಇಲ್ಲಿ ಅರ್ಜಿ ಸಲ್ಲಿಸಬಹುದು.
ಅಧ್ಯಕ್ಷರು
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ
ಜಿಲ್ಲಾ ನ್ಯಾಯಾಲಯ ಆವರಣ, ಕಾರವಾರ 581301
Discussion about this post