ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ನೈಋತ್ಯ ಮುಂಗಾರಿನ ಹಂಗಾಮಿನಲ್ಲಿ ಮಳೆ ಕೊರತೆಯಿಂದ ಆದ ಬರಕ್ಕೆ ಸಂಬoಧಿಸಿ ಹಾಗೂ ಆ ವೇಳೆಯಲ್ಲಿನ ಬೆಳೆಹಾನಿ ಆಗಿರುವ ರೈತರಿಗೆ ಸರ್ಕಾರದಿಂದ ನೆರವು ಸಿಗಲಿದೆ.
ಮಳೆಯಾಶ್ರಿತ/ಒಣಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬ ಎಂದು ಗುರುತಿಸಲಾಗಿರುವ 48,487 ರೈತ ಕುಟುಂಬಗಳಿಗೆ ತಲಾ ಗರಿಷ್ಠ ರೂ.2874ರಂತೆ ಜಿಲ್ಲೆಗೆ ಒಟ್ಟು 13.93 ಕೋಟಿ ರೂ ಜೀವನೋಪಾಯ ಪರಿಹಾರದ ನೆರವು ದೊರೆಯಲಿದೆ. ಪ್ರೋಟ್ಸ್ ತಂತ್ರಾAಶದಲ್ಲಿ ನೊಂದಣಿ ಮಾಡಿಕೊಂಡಿರುವ ರೈತ ಕುಟುಂಬಗಳ ವಿವರವನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಡಳಿತ ಕಳುಹಿಸಿದೆ. ರೈತರ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗಲಿದೆ.
Discussion about this post