ಯಲ್ಲಾಪುರ: ಬಿಸಗೋಡಿನಲ್ಲಿನ ಕಟ್ಟಡ ತೆರವು ಪ್ರಕರಣಕ್ಕೆ ಸಂಬoಧಿಸಿ ಸಭೆ ಸೇರಿದ ಗ್ರಾಮಸ್ಥರು ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.
ಪಡಿತರ ವಿತರಣಾದಾರರು `ಮಳೆಯ ಕಾರಣ ಪಡಿತರ ಅಂಗಡಿ ತೆರವುಗೊಳಿಸಿ ಬದಲಿ ವ್ಯವಸ್ಥೆ ಮಾಡಲು ಕಷ್ಟ’ ಎಂದಿದ್ದಾರೆ. ಶ್ರೀ ವೀರಾಂಜನೇಯ ದೇವಸ್ಥಾನ ಸಮಿತಿಯವರು, `ಎಂಎAಎಲ್ ನಿರ್ಮಿಸಿದ ಬಿಸಗೋಡ ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಶ್ರೀ ವೀರಾಂಜನೇಯ ದೇವಸ್ಥಾನ ಮತ್ತು ವಿ.ಟಿ. ಸೆಂಟರ್ ಹಾಗೂ ಕ್ಯಾಂಟಿನ್ ಕಟ್ಟಡಗಳನ್ನು ತೆರವುಗೊಳಿಸಬಾರದು’ ಎಂದು ಮನವಿ ಮಾಡಿದ್ದಾರೆ. `ದೇವಸ್ಥಾನ ಮತ್ತು ಸಂಸ್ಕೃತ ಪಾಠಶಾಲೆ ಧಾರ್ಮಿಕ ಭಾವನೆಗೆ ಸಂಬAಧಿಸಿದ್ದಾಗಿದ್ದು, ಇದರ ತೆರವಿಗೆ ಸಾರ್ವಜನಿಕರ ತೀವ್ರ ವಿರೋಧವಿದೆ’ ಎಂದಿದ್ದಾರೆ.
Discussion about this post