ಕುಮಟಾ: ಕೆ ಎಸ್ ಆರ್ ಟಿ ಸಿ ನಿವೃತ್ತ ನೌಕರ ಶೇಖರ ಹಮ್ಮಣ್ಣ ನಾಯ್ಕ (62) ನೇಣಿಗೆ ಶರಣಾಗಿದ್ದಾರೆ.
ಕುಮಟಾದ ಕಡ್ಲೆಯಲ್ಲಿ ವಾಸವಾಗಿದ್ದ ಅವರು 2 ವರ್ಷದ ಹಿಂದೆ ನಿವೃತ್ತರಾಗಿದ್ದರು. ವಿಪರೀತ ಮದ್ಯ ಸೇವನೆ ಮಾಡುತ್ತಿದ್ದು, ನಿವೃತ್ತಿ ನಂತರ ಅದು ಇನ್ನಷ್ಟು ಹೆಚ್ಚಾಗಿತ್ತು. ಜೂ 2ರಂದು ಸಂಜೆ ಚಿಂತೆಯಲ್ಲಿದ್ದ ಅವರು ಏಕಾಏಕಿ ಕೋಣೆಗೆ ಹೋಗಿ ಫ್ಯಾನಿಗೆ ಹಗ್ಗ ಬಿಗಿದುಕೊಟ್ಟು ಅದಕ್ಕೆ ಕೊರಳು ಕೊಟ್ಟಿದ್ದಾರೆ. ರಾತ್ರಿ ಕೋಣೆಗೆ ತೆರಳಿದ ಫೋಟೋಗ್ರಾಫರ್ ಆಗಿರುವ ಅವರ ಅಶೋಕ್ ನಾಯ್ಕ’ಗೆ ಆತ್ಮಹತ್ಯೆ ವಿಷಯ ಮೊದಲು ಗೊತ್ತಾಗಿದೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ.
Discussion about this post