ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಯಲ್ಲಾಪುರ ಸಮಿತಿ ಪ್ರತಿ ತಿಂಗಳು ನಡೆಸುವ ಕಾರ್ಯಕ್ರಮ ಈ ಸಲ ಜುಲೈ 6ರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
`ನನ್ನ ಕವನ ಮತ್ತು ಉಪನ್ಯಾಸ’ ಕಾರ್ಯಕ್ರಮವನ್ನು ಸಂಕಲ್ಪದ ಮೌನ ಗ್ರಂಥಾಲಯದಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆವಹಿಸಲಿದ್ದಾರೆ. ಪೌರಾಣಿಕ ಸಾಹಿತ್ಯದಲ್ಲಿ ಯಕ್ಷಗಾನ ಪರಂಪರೆ ಈ ವಿಷಯದ ಬಗ್ಗೆ ನಿವೃತ್ತ ಉಪನ್ಯಾಸಕ ಡಾ ಗಣಪತಿ ಭಟ್ಟ ಕಟೀಲು ಉಪನ್ಯಾಸದ ನೀಡಲಿದ್ದಾರೆ. ಮುಖ್ಯ ಯಕ್ಷಗಾನದ ಖ್ಯಾತ ಭಾಗವತರಾದ ಅನಂತ ಹೆಗಡೆ ದಂತಳಿಗೆ ಅತಿಥಿಗಳಾಗಿದ್ದಾರೆ. ನಂತರ ಕವಿಗಳಿಂದ ಮುಂಗಾರು ಕುರಿತು ಕವನ ವಾಚನ ನಡೆಯಲಿದೆ. ಸಾಹಿತ್ಯಾಸಕ್ತರೆಲ್ಲರೂ ಇಲ್ಲಿ ಸೇರೋಣ. ನೀವು ಬನ್ನಿ!
Discussion about this post