ಎಸ್ ಐ ಟಿ ಮಹಿಳಾ ಅಧಿಕಾರಿಯಾಗಿರುವ ಡಾ ಸುಮನ್ ಪೆನ್ನೆಕರ್ ಅವರ ತಂದೆ ದೇವಪ್ಪಾ ಪೆನ್ನೆಕರ್ ಇಹಲೋಕದ ಯಾತ್ರೆ ಮುಗಿಸಿದ್ದಾರೆ.
ಡಾ ಸುಮನ್ ಅವರು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ದೇವಪ್ಪ ಅವರು ಸಹ ಕಾರವಾರದಲ್ಲಿ ವಾಸವಾಗಿದ್ದರು. ಡಾ ಸುಮನ್ ಅವರು ಎಸ್ ಐ ಟಿ ಅಧಿಕಾರಿಯಾಗಿದ್ದು, ಪ್ರಜ್ವಲ್ ರೇವಣ್ಣ ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶುಕ್ರವಾರ ಡಾ ಸುಮನ್ ಅವರ ವರ್ಗಾವಣೆಯಾಗಿದ್ದು, ಮೆಟ್ರೋಪಾಲಿಟನ್ ಟಾಸ್ಕ್‌ಫೋರ್ಸ್ ಎಸ್ಪಿಯಾಗಿ ಅವರು ಅಧಿಕಾರ ಸ್ವೀಕರಿಸಬೇಕಿತ್ತು.
ದೇವಪ್ಪಾ ಪೆನ್ನೆಕರ್ ಅವರು ಕನ್ನಡ ಶಾಲೆ ಶಿಕ್ಷಕರಾಗಿದ್ದರು. ಬೆಳಗಾವಿಯ ಬೀದಿಗ್ರಾಮ ಅವರ ಮೂಲ ಊರು. ಡಾ ಸುಮನ್ ಅವರು ನಾಗರೀಕ ಸೇವೆಗೆ ಬರಲು ಅವರೇ ಸ್ಪೂರ್ತಿಯಾಗಿದ್ದರು.




Discussion about this post