ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ ಕಾರಣ ಶುಕ್ರವಾರ 255 ಜನ ಅತಂತ್ರರಾಗಿದ್ದು, ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಬೆಂಗಳೂರಿನಿoದ ಆಗಮಿಸಿರುವ ವಿಪತ್ತು ನಿರ್ವಹಣೆಯ 2 ತಂಡಗಳು ಮಂಕಿಯ ಪ್ರಾಕೃತಿಕ ವಿಕೋಪ ಕೇಂದ್ರದಲ್ಲಿ ತಂಗಿದ್ದು, ತುರ್ತು ಕಾರ್ಯಚರಣೆಗೆ ಅವರು ತಯಾರಾಗಿದ್ದಾರೆ. ಈವರೆಗೆ ಹೊನ್ನಾವರದಲ್ಲಿ 6 ಹಾಗೂ ಕುಮಟಾದಲ್ಲಿ 1 ಸೇರಿದಂತೆ ಒಟ್ಟು 7 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಶುಕ್ರವಾರ, ಕಾಳಿ ನದಿ ವ್ಯಾಪ್ತಿಯ ಕದ್ರಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಮಳೆ ಅಧಿಕವಾಗಿದ್ದು, ಗರಿಷ್ಠ ನೀರಿನ ಮಟ್ಟ 30 ಮೀ ತಲುಪಿದೆ. ಹೀಗಾಗಿ ನೀರನ್ನು ಹೊರಬಿಡಲಾಗಿದೆ. ನಿನ್ನೆಯಿಂದ ಈವರೆಗೆ 1 ಮನೆ ಕುಸಿದಿದ್ದು, 3 ಮನೆಗಳಿಗೆ ಹಾನಿಯಾಗಿದೆ. ಮಳೆಯಿಂದ ತೊಂದರೆಗೆ ಒಳಗಾದವರು ಉಚಿತ ಸಹಾಯವಾಣಿ ಸಂಖ್ಯೆ 1077 ಅಥವಾ ಮೋ 9483511015 ಕರೆ/ವಾಟ್ಸಪ್ ಮಾಡಬಹುದಾಗಿದೆ.
Discussion about this post