ನೆರೆ ಪ್ರವಾಹ ಹಾಗೂ ಡೆಂಗ್ಯು ಎರಡು ಸಮಸ್ಯೆಗಳು ಒಟ್ಟಿಗೆ ಕಾಡುತ್ತಿದ್ದು, ಸಾಕಷ್ಟು ಮುನ್ನಚ್ಚರಿಕೆ ಅಗತ್ಯ ಎಂದು ಕರೆ ನೀಡಿರುವ ಕುಮಟಾ ಶಾಸಕ ದಿನಕರ ಶೆಟ್ಟಿ ಜನರ ಆರೋಗ್ಯದ ಬಗ್ಗೆ ಕಾಳಜಿವಹಿಸಿದ್ದಾರೆ. ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು ಪ್ರವಾಹ ಹಾಗೂ ಡೆಂಗ್ಯು ನಿಯಂತ್ರಣಕ್ಕೆ ಅಗತ್ಯ ಕ್ರಮ ಜರುಗಿಸುವಂತೆ ಸೂಚಿಸಿದರು. `ಎಲ್ಲಿ ಯಾರಿಗೆ ಸಮಸ್ಯೆ ಆದರೂ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ನೋಡೆಲ್ ಅಧಿಕಾರಿಗಳು ಹಾಗೂ ಪಿಡಿಓ ಸದಾ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು’ ಎಂದವರು ಸೂಚಿಸಿದ್ದಾರೆ. `ನೀರು ತುಂಬಿದ ಊರುಗಳಿಂದ ಜನರನ್ನು ರಕ್ಷಿಸಲು ದೋಣಿಗಳನ್ನು ಇರಿಸಿಕೊಳ್ಳಬೇಕು. ಮನೆ ಹಾನಿಗೆ ತಕ್ಷಣ ಪರಿಹಾರ ನೀಡಬೇಕು’ ಎಂದರು.
ತಾಲೂಕಿನಲ್ಲಿ 10 ಡೆಂಗ್ಯು ಪ್ರಕರಣಗಳಿದ್ದು, ಇಬ್ಬರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯಾಧಿಕಾರಿ ಡಾ ಆಜ್ಞಾ ನಾಯಕ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದಿನಕರ ಶೆಟ್ಟಿ `ಎಲ್ಲಡೆ ಡೆಂಗ್ಯು ಹರಡುತ್ತಿದೆ. ಇದನ್ನು ತಡೆಯಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಿ’ ಎಂದು ಸೂಚಿಸಿದರು.
Discussion about this post