ಯಲ್ಲಾಪುರ: ಶಾರದಾಗಲ್ಲಿಯಲ್ಲಿ ವಾಸವಿರುವ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರೇಣುಕಾ ನಾರಾಯಣ ಗಡಕರ್ ಹಾಗೂ ಅಕ್ಬರ್‌ಗಲ್ಲಿ ನಿವಾಸಿಯಾಗಿರುವ ಆರೋಗ್ಯ ನಿರೀಕ್ಷಕಿ ಶ್ರದ್ಧಾ ಮಂಜುನಾಥ ಹೆಗಡೆ ಎಂಬಾತರಿಗೆ ಪ್ರಶಾಂತ ನಾರಾಯಣ ಪಾಟಣಕರ್ ಎಂಬಾತ ನಿಂದಿಸಿದ್ದು, ರೇಣುಕಾ ಅವರ ಕುಟುಂಬಕ್ಕೆ ಜೀವಬೆದರಿಕೆ ಒಡ್ಡಿದ್ದಾನೆ.
ಆರೋಪಿ ಪ್ರಶಾಂತ ಪಾಟಣಕರ್, ರೇಣುಕಾ ಅವರ ಪತಿಯ ತಮ್ಮ. ರೇಣುಕಾ ಅವರು ವಾಸವಾಗಿರುವ ಮನೆಯನ್ನು ತನಗೆ ಬಿಟ್ಟುಕೊಡಬೇಕು ಎಂಬ ವಿಷಯದಲ್ಲಿ ಹೊಡಪೆಟ್ಟು ನಡೆದಿದ್ದು, ಇದೀಗ ರಕ್ಷಣೆ ಕೋರಿ ರೇಣುಕಾ ಗಡರ್ ಪೊಲೀಸ್ ಮೊರೆ ಹೋಗಿದ್ದಾರೆ. ಜುಲೈ 5ರಂದು ಮಧ್ಯಾಹ್ನ 3.30ಕ್ಕೆ ಆರೋಗ್ಯ ನಿರೀಕ್ಷಕಿ ಶ್ರದ್ಧಾ ಹೆಗಡೆ ಅವರು ತಮ್ಮ ಇಲಾಖೆಯ ಆರೋಗ್ಯ ಸುರಕ್ಷಾಧಿಕಾರಿ ರೇಣುಕಾ ನಾರಾಯಣ ಗಡಕರ್ ಅವರ ಮನೆಗೆ ಬಂದಿದ್ದರು. ಶ್ರದ್ಧಾ ಹೆಗಡೆ ಅವರು ಅಲ್ಲಿಗೆ ಬಂದಿರುವುದನ್ನು ವಿರೋಧಿಸಿದ ಪ್ರಶಾಂತ ಪಟಗಾರ್ `ಇಲ್ಲಿ ಏಕೆ ಬಂದಿರುವೆ?’ ಎಂದು ಪ್ರಶ್ನಿಸಿದ್ದು, ಆಗ ಶ್ರದ್ಧಾ ಅವರು `ಇಲಾಖೆ ಕುರಿತು ಮಾತನಾಡಲು ಬಂದಿದ್ದೇನೆ’ ಎಂದಿದ್ದಾರೆ.
ಇದರಿoದ ಸಿಟ್ಟಾದ ಆತ ಕೆಟ್ಟದಾಗಿ ಬೈದು ಮನೆ ಮುಂದೆ ಒಣಗಿಸಿದ ಬಟ್ಟೆಗಳನ್ನು ಎಳೆದು ಬಿಸಾಕಿದ್ದು, ರೇಣುಕಾ ಅವರ ಬುಜ ಹಿಡಿದು ದೂಡಿದಾನೆ. ಆಗ ರೇಣುಕಾ ಬೊಬ್ಬೆ ಹೊಡೆದಾಗ `ನಿನ್ನ ಹಾಗೂ ನಿನ್ನ ಗಂಡನನ್ನು ಜೀವಸಹಿತ ಉಳಿಸುವುದಿಲ್ಲ’ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ.




Discussion about this post