ಉತ್ತರ ಕನ್ನಡ ಜಿಲ್ಲೆಯ ಕಂದಾಯ ಅಧಿಕಾರಿಗಳಿಗೆ ಇದೀಗ ಹೊಸದೊಂದು ಕೆಲಸ ಸಿಕ್ಕಿದೆ. ಅದುವೇ ಗಂಡು – ಹೆಣ್ಣಿನ ಜಾತಕ ನೋಡಿಸಿ ಮದುವೆ ಮಾಡಿಸುವುದು!
ಉತ್ತರ ಕನ್ನಡ ಜಿಲ್ಲಾ ಆಡಳಿತ ಮದುವೆ ಆಗದೇ ಮಾನಸಿಕ ಸಮಸ್ಯೆ ಅನುಭವಿಸುತ್ತಿರುವವರಿಗೆ ಮದುವೆ ಮಾಡಿಸುವುದಾಗಿ ಘೋಷಿಸಿದೆ. ಇದಕ್ಕಾಗಿ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟಿನಲ್ಲಿ `ಜೀವನ ಸಂಗಮ’ ಎಂಬ ವಿಭಾಗ ತೆರೆದಿದ್ದು, ಅಲ್ಲಿ ಆಸಕ್ತರ ನೋಂದಣಿಗೆ ಅವಕಾಶ ಮಾಡಿಕೊಟ್ಟಿದೆ. ಅನಾಥ ಆಶ್ರಮದಲ್ಲಿರುವ ಹೆಣ್ಣು ಮಕ್ಕಳ ಬಾಳಿಕೆ ಬೆಳಕಾಗುವ ಉದ್ದೇಶದೊಂದಿಗೆ ಈ ಚಟುವಟಿಕೆ ಶುರು ಮಾಡಿದ್ದು, ಎರಡು ದಿನದಲ್ಲಿ ಮೂರು ಅರ್ಜಿಗಳು ಸ್ವೀಕಾರವಾಗಿದೆ.
ಮುಖ್ಯವಾಗಿ ಮದುವೆ ಆಗದ ರೈತರನ್ನು ಗುರಿಯಾಗಿರಿಸಿಕೊಂಡು ಈ ವೇದಿಕೆ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ವಿಕಲಚೇತನರು, ವಿಧವೆಯರು ಸೇರಿ ಬಾಳ ಸಂಗಾತಿಯ ಅಗತ್ಯವಿರುವವರಿಗೆ ಇದೊಂದು ವೇದಿಕೆಯಾಗಲಿದೆ. ಇಲ್ಲಿ ಅರ್ಜಿ ಸಲ್ಲಿಸುವವರ ವಿವರ ಅಧಿಕಾರಿಗಳನ್ನು ಬಿಟ್ಟು ಬೇರೆಯವರಿಗೆ ಗೊತ್ತಾಗುವುದಿಲ್ಲ. ಜೊತೆಗೆ ಇದಕ್ಕೆ ಯಾವುದೇ ಶುಲ್ಕ ಸಹ ಇಲ್ಲ.
ಅರ್ಜಿ ಸಲ್ಲಿಸಿದ ನಂತರ ಸಂಬoಧಿಸಿದ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ಅರ್ಜಿದಾರರ ಹಿನ್ನಲೆ ಗಮನಿಸಿ, ಅವರಿಗೆ ಸಂಗಾತಿ ಆಗುವವರಿದ್ದರೆ ಅವರೊಡನೆ ಮಾತನಾಡಿಸುತ್ತಾರೆ. ಎಲ್ಲವೂ ಅಂದುಕೊoಡoತೆ ನಡೆದರೆ ಜಿಲ್ಲಾಡಳಿತದ ಪ್ರಯತ್ನದಿಂದ ಅವರಿಬ್ಬರು ಸತಿ-ಪತಿಗಳಾಗುತ್ತಾರೆ. 10ಕ್ಕಿಂತ ಅಧಿಕ ಜೋಡಿಗಳು ಒಮ್ಮೆಗೆ ದೊರೆತರೆ ಸಾಮೂಹಿಕ ವಿವಾಹವನ್ನು ಮಾಡುವ ಸಿದ್ಧತೆಯಲ್ಲಿ ಜಿಲ್ಲಾಡಳಿತವಿದೆ.
Discussion about this post