ಕಾರವಾರ: ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ ಕೆ ಸೈಲ್ ಅವರು ಸೋಮವಾರ ಕಾರವಾರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೇವಭಾಗದ ಕಡಲ ಕೊರೆತ ಸ್ಥಳ ಪರಿಶೀಲಿಸಿ, `ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ದೇವಭಾಗದಿಂದ ಮಾಜಾಳಿ ವರೆಗೆ ಅಂದಾಜು 8ರಿಂದ 15 ಕೋಟಿ ವೆಚ್ವದಲ್ಲಿ ರಸ್ತೆ ನಿರ್ಮಾಣವಾಗಿದ್ದು, ತಡೆಗೊಡೆ ಕಾಮಗಾರಿ ಮಾಡದ ಕಾರಣ ಸಮುದ್ರದ ನೀರು ರಸ್ತೆ ದಾಟಿ ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಬಿಡುಗಡೆಯಾದ 10 ಕೋಟಿ ರೂಗಳನ್ನು 2022ನೇ ಸಾಲಿನಲ್ಲಿ ಸರ್ಕಾರ ಹಿಂದೆ ಪಡೆದಿದ್ದು, ಬಂದರು ಇಲಾಖೆಯಿಂದ ವರದಿ ಪಡೆದುಕೊಂಡು 10 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದರು. ಮಾಜಾಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಂದರು ಕಾಮಗಾರಿಯನ್ನು ಮೀನುಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಬೇಕು ಸ್ಥಳೀಯ ಮೀನುಗಾರರ ದೋಣಿ ನಿಲ್ಲಿಸಲು ಸೂಕ್ತ ರ್ಯಾಪ್ ವ್ಯವಸ್ಥೆ ಮಾಡುವಂತೆ ಹಾಗೂ ಪ್ರವಾಸೋದ್ಯಮ ಉದ್ದೇಶದಿಂದ ಗೋವಾ ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊAಡಿರುವ ತಿಳ್ಮಾತಿ ಕಡಲ ತೀರವನ್ನು ಅಭಿವೃದ್ಧಿ ಪಡಿಸಲು ಈ ಹಿಂದೆ ನಬಾರ್ಡ್’ನಲ್ಲಿ ಓಂ ಆಕಾರದಲ್ಲಿ ನೀಲನಕ್ಷೆ ಸಿದ್ದಪಡಿಸಿ ಅನುಮೋದನೆ ಪಡೆದಿದ್ದರೂ, ಕಾಮಗಾರಿ ಆರಂಭವಾಗದೇ ಹಾಗೇ ಉಳಿದುಕೊಂಡಿದ್ದು, ಈಗ ಪುನಃ ತಿಳ್ಮಾತಿ ಸಂಪರ್ಕಿಸಲು ತೂಗು ಸೇತುವೆ ಸೇರಿದಂತೆ ಈ ಹಿಂದೆ ರೂಪಿಸಿರುವ ನೀಲನಕ್ಷೆಯಂತೆ ಕಾಮಗಾರಿ ಕೈಗೊಳ್ಳಲು ಬಂದರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
`ಕೇರವಡಿಯ ಸೇತುವೆ ಹಾಗೂ ಗೋಕರ್ಣ ಮತ್ತು ಅಂಕೋಲಾ ಸಂಪರ್ಕಿಸುವ ಗಂಗವಾಳಿ ನದಿಗೆ ಅಡ್ಡಲಾಗಿ ಮಂಜುಗುಣಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಲಾಗುವುದು’ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ ನಿಶ್ಚಲ್ ನರೋನಾ, ಕೆಪಿಸಿಎಲ್ ಅಧಿಕಾರಿಗಳು, ಕದ್ರಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಹನುಮವ್ವ ಮತ್ತಿತರರು ಇದ್ದರು.
Discussion about this post